ನವದೆಹಲಿ: 'ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಸಮಾಜಕ್ಕೆ ಉಪಯುಕ್ತವಾಗದಿದ್ದರೆ, ಅದರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ತಂತ್ರಜ್ಞರು, ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
'ಎ.ಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಆಂಥ್ರೊಪಿಕ್ನ ಸಿಇಒ ಡೆರಿಯೊ ಅಮೊಡೆಯೊ ಮತ್ತು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸಮಾಜಕ್ಕೆ ಉಪಯುಕ್ತವಾಗುವಂತೆ ಬಳಸಿಕೊಳ್ಳುವ ಬಗ್ಗೆ ಸಂವಾದ ನಡೆಸಿದರು.
'ಅರ್ಥಪೂರ್ಣ ಸಾರ್ವಜನಿಕ ಒಳಿತಿಗಾಗಿ ಎ.ಐ ಬಳಕೆ ಆಗುತ್ತಿದೆಯೇ ಎನ್ನುವುದನ್ನು ಪಾಲುದಾರರು ಖಚಿತಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ಜ್ಞಾನಾಧಾರಿತ, ಆಡಳಿತಾತ್ಮಕ ಕೆಲಸ ನಿರ್ವಹಿಸುವ ವೃತ್ತಿಪರರ ಅಸಮಾಧಾನವು ಈ ತಂತ್ರಜ್ಞಾನದ ಹಳಿಯನ್ನೇ ತಪ್ಪಿಸಬಹುದು' ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು.
'ಡೀಪ್ ಫೇಕ್ ಸೃಷ್ಟಿ ಕೂಡ ಎ.ಐನ ಕೊಡುಗೆ' ಎನ್ನುವುದನ್ನು ಗಮನಿಸಬೇಕು ನಂದನ್ ನಿಲೇಕಣಿ ಹೇಳಿದರು.

