HEALTH TIPS

ʼʼದಯವಿಟ್ಟ ಶಿಕ್ಷಕರಿಗೆ ಹಿಂಸೆ ಕೊಡಬೇಡಿʼʼ; ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳಲ್ಲಿ ದೆಹಲಿ ವಿವಿ ಪ್ರೊಫೆಸರ್ ಮನವಿ

ನವದೆಹಲಿ: ಪರೀಕ್ಷೆಯ ಆನ್ಸರ್‌ ಪತ್ರಿಕೆಯ ಮೌಲ್ಯ ಮಾಪನದಲ್ಲಿ ವಿದ್ಯಾರ್ಥಿಗಳ ವಿಚಿತ್ರ ಉತ್ತರಗಳನ್ನು ಕೇಳಿ ಶಿಕ್ಷಕರೇ ಬೆರಗುಗೊಂಡಿರುವ ಅನೇಕ ಘಟನೆಯನ್ನು ನೀವು ಕೇಳಿರಬಹುದು. ಕೆಲವೊಂದು ವಿದ್ಯಾರ್ಥಿಗಳು ಪರೀಕ್ಷೆಗೆ ಓದದೇ ಕೇಳಲಾಗುವ ಪ್ರಶ್ನೆಗಳಿಗೆ ತುಂಟತನದ ಉತ್ತರಗಳನ್ನು ಬರೆದು ಪುಟ ತುಂಬಿಸಿ ಬರುತ್ತಾರೆ.

ಇಂತಹ ಉತ್ತರಗಳನ್ನು ಕೇಳಿ ಕೆಲವು ಶಿಕ್ಷಕರು ಜೋರಾಗಿ ನಕ್ಕರೆ ಕೆಲವರು ಕೋಪಗೊಳ್ಳುತ್ತಾರೆ. ಇದೀಗ ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಮನವಿ ಮಾಡಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ.

ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿರೊಬ್ಬರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ‌. ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ ಮನವಿ ಮಾಡಿದ್ದು ಪರೀಕ್ಷೆಯ ಹಾಳೆಗಳನ್ನು ಕಸ ಎಂದು ಭಾವಿಸಿ ಪರೀಕ್ಷೆ ಬರೆಯುವುದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಭರ್ತಿ ಮಾಡಲು ಏನೇನೋ ಅಸಂಬದ್ಧ ಬರೆಯುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:

View this post on Instagram

"ನನ್ನ ದೆಹಲಿ ವಿವಿ ವಿದ್ಯಾರ್ಥಿಗಳಲ್ಲಿ ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಶಿಕ್ಷಕರಿಗೆ ಹಿಂಸೆ ಕೊಡ ಬೇಡಿ. ಉತ್ತರ ಪತ್ರಿಕೆಯಲ್ಲಿ ಏನೇನೋ ಅಸಂಬದ್ಧ ವಿಷಯಗಳನ್ನು ಯಾಕೆ ಬರೆಯುತ್ತೀರಿ? ಶಿಕ್ಷಕರು ನಿಮಗೆ ಅಷ್ಟು ಕೆಟ್ಟದಾಗಿ ಪಾಠ ಮಾಡುವುಲ್ಲ'' ಎಂದಿದ್ದಾರೆ.

ಪ್ರಾಧ್ಯಾಪಕಿ ಶಿಖಾ ಶರ್ಮಾ ಈ ವಿಡಿಯೊ ಶೇರ್ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪುಟಗಳನ್ನು ತುಂಬಿಸಬೇಕು ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಅನುಸರಿಸುತ್ತಿರುವ ವಿಚಿತ್ರ ನಡವಳಿಕೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ʼʼಕೆಲವು ವಿದ್ಯಾರ್ಥಿಗಳು ಬಾಲಿವುಡ್ ಚಿತ್ರ 'ಕ್ರಿಶ್‌'ನ ಹಾಡನ್ನು ಬರೆಯುವವರೆಗೆ ಹೋಗುತ್ತಾರೆ. ಬರೆದಿರುವ ವಿಷಯಕ್ಕೂ ಪ್ರಶ್ನೆಗೂ ಸಂಬಂಧವೇ ಇರುವುದಿಲ್ಲ, ಜತೆಗೆ ಅಕ್ಷರಗಳೂ ಅರ್ಥವಾಗುವುದಿಲ್ಲʼʼ ಎಂದು ತಿಳಿಸಿದ್ದಾರೆ.

ಪರೀಕ್ಷಾ ಪೇಪರ್‌ಗಳನ್ನು ಮೌಲ್ಯಮಾಪನ ಮಾಡು ವಾಗ ವಿದ್ಯಾರ್ಥಿಗಳು ಬರೆಯುವ 'ವಿಚಿತ್ರ' ಉತ್ತರಗಳನ್ನು ಕಂಡು ಬೇಸರಗೊಂಡ ಅವರು ಕೈಮುಗಿದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ‌. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ʼʼಪ್ರಶ್ನೆಗೆ ಉತ್ತರವೇ ಗೊತ್ತಿಲ್ಲ ಅಂದಾಗ ಪುಟ ಆದರೂ ಭರ್ತಿ ಮಾಡಬೇಕಲ್ಲʼʼ ಎಂದಿದ್ದಾರೆ. ಮತ್ತೊಬ್ಬರು ʼʼಇದು ನನಗೆ ಹೇಳಿದಂತೆ ಇದೆ. ಬಹುಶಃ ನನ್ನ ಪರೀಕ್ಷೆ ಪೇಪರ್ ಸಿಕ್ಕಿರಬೇಕುʼʼ ಎಂದು ತಮಾಷೆ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries