ವಾಷಿಂಗ್ಟನ್: ಭದ್ರತಾ ಕಾಳಜಿಯ ಹಿನ್ನೆಲೆಯಲ್ಲಿ ದೇಶವನ್ನು ತಕ್ಷಣ ತೊರೆಯುವಂತೆ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅಮೆರಿಕದ ರಾಯಭಾರಿ ಮೈಕ್ ಹಕಾಬಿ ಗುರುವಾರ ಸೂಚಿಸಿರುವುದಾಗಿ ವರದಿಯಾಗಿದೆ.
ಇಸ್ರೇಲನ್ನು ತೊರೆಯಲು ಇಚ್ಚಿಸುವವರು ತಕ್ಷಣ ನಿರ್ಗಮಿಸಬೇಕು.
ತಕ್ಷಣ ಬೆನ್-ಗ್ಯುರಿಯೊನ್ ವಿಮಾನ ನಿಲ್ದಾಣದಿಂದ ತೆರಳುವ ವಿಮಾನಗಳಲ್ಲಿ ಟಿಕೆಟನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಇಸ್ರೇಲ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಸಿಬ್ಬಂದಿಗಳಿಗೆ ಗುರುವಾರ ತಡರಾತ್ರಿ ಇ-ಮೇಲ್ ಮೂಲಕ ಸೂಚನೆ ರವಾನಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
`ರಾಯಭಾರಿ ಕಚೇರಿಯು `ಅಧಿಕೃತ ನಿರ್ಗಮನ' ದರ್ಜೆಗೆ ಬದಲಾಗಿದ್ದು ತುರ್ತು ಅಗತ್ಯವಿಲ್ಲದ ಸಿಬ್ಬಂದಿ ಮತ್ತವರ ಕುಟುಂಬ ಸದಸ್ಯರನ್ನು ಸರಕಾರದ ವೆಚ್ಚದಲ್ಲಿ ನಿರ್ಗಮಿಸಲು ಅವಕಾಶವಿದೆ. ವಿದೇಶಾಂಗ ಇಲಾಖೆಯೊಂದಿಗೆ ಸಮಾಲೋಚಿಸಿದ ಬಳಿಕ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಆದರೆ ಗಾಭರಿಗೊಳ್ಳುವ ಅಗತ್ಯವಿಲ್ಲ ಎಂದು ಮೈಕ್ ಹಕಾಬಿ ಹೇಳಿದ್ದಾರೆ. ಅಮೆರಿಕವು ಇರಾನ್ ಮೇಲೆ ನಡೆಸಬಹುದಾದ ದಾಳಿಗೆ ಇಸ್ರೇಲ್ ಕೂಡಾ ಕೈಜೋಡಿಸಬಹುದು. ಆಗ ಇಸ್ರೇಲ್ ವಿರುದ್ದವೂ ಇರಾನ್ ಪ್ರತೀಕಾರದ ಕ್ರಮ ಕೈಗೊಳ್ಳಬಹುದು.

