ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‍ಗೆ ರವಿವಾರ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ಸಶಸ್ತ್ರದಾರಿ ವ್ಯಕ್ತಿಯನ್ನು ಅಮೆರಿಕದ ಗುಪ್ತಚರ ಸೇವೆಯ ಅಧಿಕಾರಿಗಳು ಗುಂಡಿಕ್ಕಿ ಹತ್ಯೆ ನಡೆಸಿರುವುದಾಗಿ ವರದಿಯಾಗಿದೆ.
ಸ್ಥಳೀಯ ಕಾಲಮಾನ ರವಿವಾರ ಬೆಳಿಗ್ಗೆ 1:30ಕ್ಕೆ ಘಟನೆ ನಡೆದಿದೆ. ರೆಸಾರ್ಟ್‍ನ ಉತ್ತರ ಗೇಟ್‍ನ ಬಳಿ ಸುಮಾರು 20 ವರ್ಷದ ವ್ಯಕ್ತಿಯನ್ನು ಗನ್ ಮತ್ತು ಪೆಟ್ರೋಲ್ ತುಂಬಿದ್ದ ಕ್ಯಾನ್‍ನೊಂದಿಗೆ ಪತ್ತೆಹಚ್ಚಲಾಗಿದೆ. ಶರಣಾಗುವಂತೆ ಅಧಿಕಾರಿಗಳು ನೀಡಿದ್ದ ಸೂಚನೆಯನ್ನು ಆತ ನಿರ್ಲಕ್ಷಿಸಿದಾಗ ಗುಂಡಿನ ಚಕಮಕಿ ನಡೆದಿದ್ದು ಶಂಕಿತ ವ್ಯಕ್ತಿ ಸ್ಥಳದಲ್ಲೇ ಗಾಯಗೊಂಡಿದ್ದಾನೆ. ಯಾವುದೇ ಅಧಿಕಾರಿಗಳು ಗಾಯಗೊಂಡಿಲ್ಲ ಎಂದು ಗುಪ್ತಚರ ಸೇವಾ ಇಲಾಖೆಯ ಹೇಳಿಕೆ ತಿಳಿಸಿದೆ.

