HEALTH TIPS

ತಾರಿಕ್ ರೆಹಮಾನ್ ಪದಗ್ರಹಣ ಸಮಾರಂಭಕ್ಕೆ ಮೋದಿ ಯಾಕಾಗಿ ಹೋಗ್ತಿಲ್ಲ; ಇಲ್ಲಿದೆ ಕಾರಣ

ನವದೆಹಲಿ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) ಆಹ್ವಾನ ನೀಡಿತ್ತು. ಆದರೆ, ಮೋದಿಯವರು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.

ಬಾಂಗ್ಲಾದೇಶದ ಪ್ರಧಾನಿ ಪದಗ್ರಹಣ ಸಮಾರಂಭಕ್ಕೆ ನರೇಂದ್ರ ಮೋದಿಯವರ ಬದಲು ಭಾರತದ ಪ್ರತಿನಿಧಿಯಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾಗವಹಿಸಲಿದ್ದಾರೆ. ಬಿರ್ಲಾ ಅವರ ಜೊತೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕೂಡ ತೆರಳಲಿದ್ದಾರೆ.

ಮೋದಿ ಹೋಗದಿರಲು ಕಾರಣ

ಮಂಗಳವಾರ ಢಾಕಾದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಮೋದಿ ಅವರನ್ನು ಬಿಎನ್‌ಪಿ ಆಹ್ವಾನಿಸಿದೆ. ಆದರೆ, ಅದೇ ದಿನ ಮುಂಬೈನಲ್ಲಿ ನಡೆಯಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆಗಿನ ಎಐ ಶೃಂಗಸಭೆಗೆ ಪ್ರಧಾನಿ ಮೋದಿ ಆತಿಥ್ಯ ವಹಿಸಬೇಕಾಗಿರುವುದರಿಂದ ಬಾಂಗ್ಲಾದಲ್ಲಿ ನಡೆಯಲಿರುವ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಮಾಹಿತಿಯನ್ನು ಭಾರತ ಸರ್ಕಾರವು ಬಿಎನ್‌ಪಿಗೆ ತಿಳಿಸಿದೆ.

54 ವರ್ಷಗಳ ಬಾಂಗ್ಲಾದೇಶದ ಇತಿಹಾಸದಲ್ಲಿ, ಕಳೆದ 4 ಸಂಸತ್ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಅವಾಮಿ ಲೀಗ್ ಇಲ್ಲದೆ ನಡೆದ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ಅವರ ಬಿಎನ್‌ಪಿ ಭರ್ಜರಿ ಬಹುಮತ ದಾಖಲಿಸಿದೆ. ಈ ಗೆಲುವಿನ ಬಳಿಕ ಮೋದಿಯವರು ರೆಹಮಾನ್‌ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries