ಫ್ಲೋರಿಡಾಗೆ ಹೋಗುವ ಮಾರ್ಗ ಮಧ್ಯೆ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದೇವೆ.
ಭಾರತ ಇರಾನ್ ನಿಂದ ಖರೀದಿಸುವ ಬದಲು ವೆನೆಜುವೆಲಾದ ತೈಲವನ್ನು ಖರೀದಿಸಲಿದೆ ಎಂದು ಹೇಳಿದ್ದಾರೆ.
2019ರವರೆಗೆ ಭಾರತ ಇರಾನ್‌ನಿಂದ ತೈಲದ ಪ್ರಮುಖ ಖರೀದಿದಾರನಾಗಿತ್ತು. ಟೆಹ್ರಾನ್ ಮೇಲೆ ಅಮೆರಿಕ ಮತ್ತೆ ನಿರ್ಬಂಧಗಳನ್ನು ಹೇರಿದ ನಂತರ ಆಮದು ಗಮನಾರ್ಹವಾಗಿ ಕಡಿಮೆಯಾಯಿತು.

