HEALTH TIPS

ಲಂಡನ್‌: ಜೆಫ್ರಿ ಎಪ್‌ಸ್ಟೈನ್‌ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಆರೋಪ

ಲಂಡನ್‌: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ವಿರುದ್ಧ ಮತ್ತೊಬ್ಬ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ರಾಜಕುಮಾರ ಆಯಂಡ್ರೂ ಮೌಂಟ್‌ ಬ್ಯಾಟನ್‌ ಜೊತೆಯಲ್ಲಿ ಲೈಂಗಿಕ ಸಂಪರ್ಕ ಬೆಳೆಸುವಂತೆ ತನ್ನನ್ನು ಬ್ರಿಟನ್‌ಗೆ ಕಳುಹಿಸಲಾಗಿತ್ತು ಎಂದು ಮಹಿಳೆ ಆರೋಪಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

2010ರಲ್ಲಿ ಮಹಿಳೆಗೆ 20 ವರ್ಷವಿದ್ದಾಗ ಪಶ್ಚಿಮ ಲಂಡನ್‌ನ ವಿಂಡ್‌ಸರ್‌ ಎಸ್ಟೇಟ್‌ನಲ್ಲಿರುವ ನಿವಾಸದಲ್ಲಿ ಲೈಂಗಿಕ ಸಂಪರ್ಕ ನಡೆದಿದೆ ಎಂದು ಮಹಿಳೆ ಪರ ಅಮೆರಿಕ ವಕೀಲರು ತಿಳಿಸಿದ್ದಾರೆ ಎಂದು ಬಿಬಿಸಿ ಹೇಳಿದೆ.

ಎಪ್‌ಸ್ಟೈನ್‌ ಪ್ರಕರಣದ ಕುರಿತಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ಭಾರಿ ಪ್ರಮಾಣದ ದಾಖಲೆಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈ ಆರೋಪ ಕೇಳಿಬಂದಿದೆ.

'ಆಯಂಡ್ರೂ ಅವರೊಂದಿಗೆ ಒಂದು ರಾತ್ರಿ ಕಳೆದ ನಂತರ ಅವರು ನನ್ನನ್ನು ಬಕಿಂಗ್‌ಹ್ಯಾಮ್‌ ಅರಮನೆಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು' ಎಂದು ಮಹಿಳೆ ತಿಳಿಸಿದ್ದಾರೆ ಎಂದು ಎಡ್ವರ್ಡ್ಸ್‌ ಹೆಂಡರ್‌ಸನ್‌ ಕಾನೂನು ಸಂಸ್ಥೆಯ ಬ್ರಾಡ್‌ ಎಡ್ವರ್ಡ್‌ ಅವರು ಹೇಳಿದ್ದಾರೆ ಎಂದು ಬಿಬಿಸಿ ತಿಳಿಸಿದೆ.

ಎಪ್‌ಸ್ಟೈನ್‌ ಲೈಂಗಿಕ ಹಗರಣದ ಸುಮಾರು 200 ಸಂತ್ರಸ್ತೆಯರ ಪರ ವಕೀಲರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆಯಂಡ್ರೂ ಅವರೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಪ್‌ಸ್ಟೈನ್‌ ಹಗರಣಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ಅವರು ನಿರಾಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರು, 'ಆಯಂಡ್ರೂ ಅವರು ಅಮೆರಿಕದ ಸಂಸದೀಯ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವ ಪರೀಕ್ಷೆಗೆ ಒಳಗಾಗಬೇಕು' ಎಂದು ಹೇಳಿದ್ದಾರೆ.

ಲೈಂಗಿಕ ವೃತ್ತಿಗೆ ಬಾಲಕಿಯರನ್ನು ಅಕ್ರಮವಾಗಿ ಸಾಗಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಪ್‌ಸ್ಟೈನ್‌ 2019ರಲ್ಲಿ ಕಾರಾಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಭದ್ರತಾ ಸಲಹೆಗಾರ ರಾಜೀನಾಮೆ

ಎಪ್‌ಸ್ಟೈನ್‌ ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಸ್ಲೋವಾಕಿಯಾ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಿರೋಸ್ಲಾವ್ ಲಾಜ್‌ಕಾಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 2018ರಲ್ಲಿ ಲಾಜ್‌ಕಾಕ್‌ ಅವರು ಮಹಿಳೆಯೊಬ್ಬರ ಬಗ್ಗೆ ಎಪ್‌ಸ್ಟೈನ್‌ ಜೊತೆಗೆ ಸಂದೇಶ ವಿನಿಮಯ ಮಾಡಿದ್ದರು ಎಂದು ಬಿಬಿಸಿ ಹೇಳಿದೆ. ಲಾಜ್‌ಕಾಕ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಪ್ರಧಾನಿ ರಾಬರ್ಟ್‌ ಫಿಕೊ ಅವರು ಫೇಸ್‌ಬುಕ್‌ನಲ್ಲಿ ಶನಿವಾರ ಪ್ರಕಟಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries