HEALTH TIPS

ರಾಯ್ ಉತ್ತರಾಧಿಕಾರಿ ಯಾರು? ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ

ಬೆಂಗಳೂರು: ಸಿಜೆ ರಾಯ್ ದುರಂತ ಸಾವಿನ ಬಳಿಕ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಾನ್ಫಿಡೆಂಟ್ ಗ್ರೂಪ್ ಉದ್ಯಮ ಮುನ್ನಡೆಸುವರು ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಪ್ರಮುಖವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಚಾಕಚಕ್ಯತೆ, ಸರಿಯಾದ ನಿರ್ಧಾರಗಳು ಅತ್ಯಗತ್ಯ.

ಸಿಜೆ ರಾಯ್ ಅತ್ಯಂತ ಯಶಸ್ವಿಯಾಗಿ ಕಾನ್ಫಿಡೆಂಟ್ ಗ್ರೂಪ್ ಕಂಪನಿ ಕಟ್ಟಿದ್ದರು. ಆದರೆ ದಿಢೀರ್ ಸಾವಿನಿಂದ ಕಾನ್ಫಿಡೆಂಟ್ ಗ್ರೂಪ್‌ಗೆ ಆತಂಕ ಎದುರಾಗಿದೆ. ಇದೀಗ ಕುಟುಂಬಸ್ಥರು ಕಾನ್ಫಿಡೆಂಟ್ ಗ್ರೂಪ್ ಮುನ್ನಡೆಸುವರು ಯಾರು ಅನ್ನೋದನ್ನು ಘೋಷಿಸಿದ್ದಾರೆ. ಸಿಜೆ ರಾಯ್ ಸಹೋದರ ಸಿಜೆ ಬಾಬು ಕುಟುಂಬದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕಾನ್ಫಿಡೆಂಟ್ ಗ್ರೂಪ್ ಜವಾಬ್ದಾರಿ ಯಾರ ಹೆಗಲಿಗೆ

ಕಾನ್ಫಿಡೆಂಟ್ ಗ್ರೂಪ್ ಜವಾಬ್ದಾರಿ ಇದೀಗ ಸಿಜೆ ರಾಯ್ ಪುತ್ರ ರೋಹಿತ್ ರಾಯ್ ಹಾಗೂ ಕಾನ್ಫಿಡೆಂಟ್ ಗ್ರೂಪ್ ಕೇರಳ ಉಸ್ತುವಾರಿ ಜೊಸೆಫ್ ಹೆಗಲಿಗೆ ಬಂದಿದೆ. ಈ ಘೋಷಣೆಯನ್ನು ಸಿಜೆ ರಾಯ್ ಸಹೋದರು ಸಿಜೆ ಬಾಬು ಮಾಡಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರಾಗಿರುವ ಜೊಸೆಫ್ ಹಾಗೂ ಸಿಜೆ ರಾಯ್ ಪುತ್ರ ರೋಹಿತ್ ರಾಯ್ ಕಾನ್ಫಿಡೆಂಟ್ ಗ್ರೂಪ್ ಮುನ್ನಡೆಸಲಿದ್ದಾರೆ. ಕಂಪನಿಯ ಎಲ್ಲಾ ಯೋಜನೆಗಳು ನಿಗದಿಯಂತೆ, ನಿರ್ಧರಿಸಿದಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಲ ಇಲ್ಲ, ಆರ್ಥಿಕ ಸಮಸ್ಯೆಗಳಿಲ್ಲ

ಕಾನ್ಫಿಡೆಂಟ್ ಗ್ರೂಪ್ ಯಾವುದೇ ಸಾಲ ಮಾಡಿ ರಿಯಲ್ ಎಸ್ಟೇಟ್ ಉದ್ಯಮ ನಡೆಸಿಲ್ಲ. ಇತ್ತ ಸಿಜೆ ರಾಯ್ ಅವರಿಗೂ ಯಾವುದೇ ಸಾಲ ಇರಲಿಲ್ಲ. ಜೊತೆಗೆ ಆರ್ಥಿಕ ಸಮಸ್ಯೆಯೂ ಇರಲಿಲ್ಲ. ಹೀಗಾಗಿ ಸಿಜೆ ರಾಯ್ ಯಾವ ಕಾರಣಕ್ಕಾಗಿ ದುರಂತ ಅಂತ್ಯಕಂಡಿದ್ದಾರೆ ಅನ್ನೋ ಪ್ರಶ್ನೆ ಹಾಗೇ ಉಳಿದುಕೊಂಡಿದೆ ಎಂದು ಸಿಜೆ ಬಾಬು ಹೇಳಿದ್ದಾರೆ. ಸಿದೆ ರಾಯ್ ಸಾವಿನ ಬಗ್ಗೆ ಕುಟುಂಬದ ಆತಂಕವನ್ನು ಪೊಲೀಸರಿಗೆ ತಿಳಿಸಲಾಗಿದೆ ಎಂದು ಬಾಬು ಹೇಳಿದ್ದಾರೆ. ಕರ್ನಾಟಕ ಪೊಲೀಸರ ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ತನಗೆ ಮೂರು ಬಾರಿ ಕರೆ ಮಾಡಿದ್ದರು ಎಂದಿದ್ದಾರೆ.

ನನ್ನ ತಂದೆಯ ಸಾವಿನ ಆಘಾತ

ಸಿ.ಜೆ. ರಾಯ್ ಅವರ ಸಾವು ಉಂಟುಮಾಡಿದ ಆಘಾತವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಗ ರೋಹಿತ್ ಹೇಳಿದ್ದರು. ತನ್ನ ತಂದೆ ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು ಎಂದಿದ್ದಾರೆ. ಇದೇ ವೇಳೆ ಮಾಧ್ಯಮಗಳು ನೀಡಿದ ಬೆಂಬಲಕ್ಕೆ ಧನ್ಯವಾದಗಳು ಎಂದು ರೋಹಿತ್ ಹೇಳಿದ್ದಾರೆ.. ಅವರ ಸಾವಿನಿಂದಾದ ನಷ್ಟವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಮಗ ಸ್ಪಷ್ಟಪಡಿಸಿದರು. ಆದಾಯ ತೆರಿಗೆ ಅಧಿಕಾರಿಗಳಿಂದ ಯಾವುದೇ ಒತ್ತಡದ ಬಗ್ಗೆ ತಂದೆ ತನ್ನ ಬಳಿ ನೇರವಾಗಿ ಏನನ್ನೂ ಹೇಳಿರಲಿಲ್ಲ. ಕುಟುಂಬಕ್ಕೆ ಉಂಟಾದ ಈ ದೊಡ್ಡ ನಷ್ಟವನ್ನು ವಿವರಿಸಲು ಸಾಧ್ಯವಿಲ್ಲ ಎಂದು ರೋಹಿತ್ ಭಾವುಕರಾಗಿದ್ದರು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ನೇಚರ್ ಕ್ಯಾಸ್ಕೇಡ್‌ನಲ್ಲಿ ರಾಯ್ ಅವರ ಅಂತ್ಯಕ್ರಿಯೆಯ ನಂತರ ರೋಹಿತ್ ರಾಯ್ ಪ್ರತಿಕ್ರಿಯಿಸಿದ್ದಾರೆ.

ಸಿ.ಜೆ. ರಾಯ್ ಅವರಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದ್ದಾರೆ. ನೇಚರ್ಸ್ ರೆಸಾರ್ಟ್‌ನಲ್ಲಿ ಸಿಜೆ ರಾಯ್ ಅಂತ್ಯಸಂಸ್ಕಾರ ನಡೆದಿದೆ. ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ರಾಯ್ ಅವರ ನೆಚ್ಚಿನ ನೇಚರ್ಸ್ ಲಕ್ಸುರಿ ಕ್ಯಾಸ್ಕೇಡ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಸ್ಥಳೀಯರು, ಉದ್ಯಮ ಪ್ರಮುಖರು, ಸಿನಿಮಾ ಕ್ಷೇತ್ರದ ಗಣ್ಯರು ಸೇರಿದಂತೆ ಸಾವಿರಾರು ಜನರು ರಾಯ್‌ಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು. ನಂತರ ಸಂಜೆ ನಾಲ್ಕೂವರೆ ಸುಮಾರಿಗೆ ನೇಚರ್ಸ್ ಲಕ್ಸುರಿಯಲ್ಲಿಯೇ ಅಂತ್ಯಕ್ರಿಯೆ ನಡೆಯಿತು. ಸಾರ್ವಜನಿಕ ದರ್ಶನದ ವೇಳೆ ನೇಚರ್ಸ್ ಲಕ್ಸುರಿಯಲ್ಲಿ ಭಾವನಾತ್ಮಕ ದೃಶ್ಯಗಳು ಕಂಡುಬಂದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries