ಮಂಜೇಶ್ವರ: ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆಯನ್ವಯ ಮಂಜೇಶ್ವರ ಕ್ಷೇತ್ರದ ಬಿಜೆಪಿ ಬೂತ್ ಮತ್ತು ಶಕ್ತಿಕೇಂದ್ರದ ಉಸ್ತುವಾರಿಗಳ ಸಭೆ ಮಂಗಳವಾರ ಹೊಸಂಗಡಿಯಲ್ಲಿ ಜರುಗಿತು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸಮಾರಂಭ ಉದ್ಘಾಟಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ವಲಯ ಉಪಾಧ್ಯಕ್ಷ ವಿಜಯ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷರಾದ ಪಿ.ರಮೇಶ್, ಮಣಿಕಂಠ ರೈ, ಮುರಳೀಧರ ಯಾದವ್, ಜಿಲ್ಲಾ ಕಾರ್ಯದರ್ಶಿಗಳಾದ ಎನ್.ಮಧು, ಲೋಕೇಶ್ ನೋಂಡ, ರಾಜ್ಯ ಸಮಿತಿ ಸದಸ್ಯರಾದ ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪುರಂ, ಮಂಜೇಶ್ವರ ಮಂಡಲದ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ, ಕುಂಬಳೆ ಮಂಡಲದ ಅಧ್ಯಕ್ಷ ಸುನಿಲ್ ಅನಂತಪುರ ಉಪಸ್ಥಿತರಿದ್ದರು.


