ಕಾಸರಗೋಡು: ನಾಪತ್ತೆಯಾಗಿದ್ದ ಕಾಸರಗೋಡು ನೆಲ್ಲಿಕುಂಜೆ ಚೀರುಂಬಾ ರಸ್ತೆ ಸನಿಹದ ನಿವಾಸಿ ರತೀಶ್(39)ಅವರ ಮೃತದೇಹ ಕಾಸರಗೋಡು ಹಾರ್ಬರ್ ಸನಿಹದ ಗಾಳಿಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಂಟೀರಿಯರ್ ಡೆಕೋರೇಟರ್ ಕಾರ್ಮಿಕರಾಗಿದ್ದ ಇವರು, ಸೋಮವಾರ ಬೆಳಗ್ಗಿಂದ ನಾಪತ್ತೆಯಾಗಿದ್ದು, ಹುಡುಕಾಡುವ ಮಧ್ಯೆ ಮೃತದೇಹ ಪತ್ತೆಯಾಗಿದೆ.

