ಮಂಜೇಶ್ವರ: ಕುಂಜತ್ತೂರಿನಲ್ಲಿ ಮರಿಯಂ ಜುಮೈಲಾ(18)ಳನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಯುವತಿಯ ತಾಯಿಯ ಸಹೋದರಿ ಪತಿ ಶೇಕುಞÂ(63)ಅವರೂ ಸಾವಿಗೀಡಾಗಿದ್ದು, ಕುಟುಂಬ ಕಲಹಕ್ಕೆ ಸಂಬಂಧಿಸಿ ಎರಡು ಜೀವಗಳು ಬಲಿಯಾಗಿದೆ.
ಕುಂಜತ್ತೂರು ಹಿಲ್‍ಟಾಪ್ ನಿವಾಸಿ, ಉಮ್ಮರ್‍ಫಾರೂಕ್ ಅವಳಿ ಕೊಲೆಗಳ ಆರೋಪಿಯಾಗಿದ್ದು, ಈತನನ್ನು ಈಗಾಗಲೇ ಪೊಲೀಸರುಬಂಧಿಸಿದ್ದಾರೆ.
ಆಸ್ತಿ ತರ್ಕ ಕಾರಣ?:
ವಿದೇಶದಲ್ಲಿ ಉದ್ಯೋಗಿಯಾಗಿದ್ದ ಉಮ್ಮರ್‍ಫಾರೂಕ್ ಒಂದುವರೆ ತಿಂಗಳ ಹಿಂದೆ ಊರಿಗೆ ಬಂದಿದ್ದನು. ಉಮ್ಮರ್ ಫಾರೂಕ್ ಪತ್ನಿ ತಾಹಿರಾ ಹಾಗೂ ಪುತ್ರಿ ಮರಿಯಂ ಜುಮೈಲಾ ತೂಮಿನಾಡಿನ ಹಿಲ್‍ಟಾಪ್‍ನಲ್ಲಿರುವ ಶೇಕುಞÂ ಅವರ ಮನೆಯಲ್ಲೇ ಜತೆಯಗಿ ವಾಸಿಸುತ್ತಿದ್ದರು. ತಾಹಿರಾ ಅವರ ಸಹೋದರಿಯ ಕುಟುಂಬದೊಂದಿಗೆ ಉಮ್ಮರ್‍ಫಾರೂಕ್ ಈ ಹಿಂದೆಯೇ ಆಸ್ತಿ ತರ್ಕ ಹೊಂದಿದ್ದರು. ಆಸ್ತಿ ತರ್ಕ ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಮಾತುಕತೆಗಾಗಿ ಎರಡೂ ಕಡೆಯವರು ಒಟ್ಟು ಸೇರಿದ್ದಾರೆ. ಈ ಮಧ್ಯೆ ಉಮ್ಮರ್ ಫಾರೂಕ್ ಹಾಗೂ ಶೇಕುಞÂ ಮಧ್ಯೆ ವಾಗ್ವಾದ ಉಂಟಾಗಿದ್ದು, ಈ ಸಂದರ್ಭ ಉಮ್ಮರ್ ಫಾರೂಕ್ ತನ್ನ ವಶದಲ್ಲಿದ್ದ ಚಾಕುವನ್ನು ಶೇಕುಞÂ ಮೇಲೆಬೀಸಿದ್ದು, ಇದನ್ನು ತಡೆಯುವ ಯತ್ನದಲ್ಲಿ ಜುಮೈಲಾಗೂ ಗಂಭೀರ ಗಾಯಗಳುಂಟಾಗಿತ್ತು. ತನ್ನ ಗಾಯ ಲೆಕ್ಕಿಸದೆ ಶೇಕುಞÂ ಅವರು ಜುಮೈಲಾ ಜತೆ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಗೆ ತಲುಪುತ್ತಿದ್ದಂತೆ ಕುಸಿದು ಬಿದ್ದಿದ್ದರು. ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಜುಮೈಲಾ ಸಾವನ್ನಪ್ಪಿದ್ದರೆ, ಜೀವನ್ಮರಣದ ಹೋರಾಟದಲ್ಲಿದ್ದ ಶೇಕುಞÂ ಮಂಗಳವಾರ ಮೃತಪಟ್ಟಿದ್ದಾರೆ.
ಪ್ಲಸ್‍ಟು ವಿದ್ಯಾಭ್ಯಾಸದ ನಂತರ ಜುಮೈಲಾ ಉಪ್ಪಳದ ಕೇಂದ್ರವೊಂದರಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಳು. ಇಬ್ಬರ ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.



