HEALTH TIPS

ನವಕೇರಳ ನಾಗರಿಕ ಸ್ಪಂದನಾ ಕಾರ್ಯಕ್ರಮ-ಅವಲೋಕನಾ ಸಭೆ

ಕಾಸರಗೋಡು: ನವಕೇರಳ ನಾಗರಿಕ ಸ್ಪಂದನಾ ಕಾರ್ಯಕ್ರಮದ ಅಂಗವಾಗಿ ನಡೆಸಲಾಗುತ್ತಿರುವ ಮನೆ ಭೇಟಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಚಟುವಟಿಕೆಗಳು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.

ಅವರು ನವಕೇರಳ ನಾಗರಿಕ ಸ್ಪಂದನಾ ಕಾರ್ಯಕ್ರಮದನ್ವಯ ಮನೆ ಸಂದರ್ಶನ ನಡೆಸುವ ಕ್ರಿಯಾ ಸೇನೆ ಸದಸ್ಯರ ಅವಲೋಕನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರ ಚಟುವಟಿಕೆಗಳ ಪ್ರಸ್ತುತ ಪ್ರಗತಿ ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲಾಯಿತು. ಉಳಿದ ಚಟುವಟಿಕೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು.   ಯೋಜನೆಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಂಘಟಿತ ಕೆಲಸವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.  ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಪಿ. ಸುಧಾಕರನ್ ಹಾಗೂ ಎಂ. ಗೌತಮ್ ಅವರು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಮತ್ತು ಕಲ್ಯಾಣ ಅಧ್ಯಯನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಆನ್‍ಲೈನ್ ಮೂಲಕಪಾಲ್ಗೊಂಡರು.   

ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂಧನನ್ ವರದಿ ಮಂಡಿಸಿದರು. ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್.ಲಾರೆನ್ಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಬಾಲಕೃಷ್ಣನ್, ಕೆ.ಅನಿಲ್ ಕುಮಾರ್, ವಿಧಾನಸಭಾ ಕ್ಷೇತ್ರ ಉಸ್ತುವಾರಿ ಅಧಿಕಾರಿಗಳಾದ ಕೆ.ವಿ. ಸುಧಾಕರನ್, ಕೆ.ಸಜಿತ್ ಕುಮಾರ್, ಕೆ.ವಿ. ಮನೋಜ್ ಕುಮಾರ್, ಎ.ರವೀಂದ್ರ, ಕೆ.ನಾಗೇಶ್, ತರಬೇತುದಾರರಾದ ಪಿ.ಎಂ. ನಂದಕುಮಾರ್, ಟಿ.ವಿ.ವಿನೋದ್ ಕುಮಾರ್ ಹಾಗೂ ಪಂಚಾಯತ್ ಮುಖ್ಯ ಪ್ರಭಾರ ಅಧಿಕಾರಿಗಳಾದ ಕೆ. ಹರೀಶ, ಎಂ.ಜಿ. ವಿಜಯನ್, ಬಿ.ಉಷಾ, ವಿ.ವಿ. ಶಿಜಿ, ಜಿಲ್ಲೆಯ ವಿವಿಧ ಪಂಚಾಯತ್ ಮಟ್ಟದ ಉಸ್ತುವಾರಿ ಅಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತರಬೇತುದಾರರು   ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries