HEALTH TIPS

ಕುಂಟಿಕಾನ ಶಾಲಾ ವಾರ್ಷಿಕೋತ್ಸವ- ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆ

ಬದಿಯಡ್ಕ: ವಿದ್ಯಾಭ್ಯಾಸ, ಸಾಂಸ್ಕøತಿಕ, ಆಟೋಟ ಹಾಗೂ ಇನ್ನಿತರ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡುವಲ್ಲಿ ಅಧ್ಯಾಪಕರ ಶ್ರಮವಿದೆ. ಗ್ರಾಮೀಣ ಪ್ರದೇಶದ ಶಾಲೆಯು ಉತ್ತಮವಾಗಿ ಕಾರ್ಯಾಚರಿಸುತ್ತಿದೆ ಎಂಬುದಕ್ಕೆ ಇಲ್ಲಿನ ಮಕ್ಕಳ ಸಂಖ್ಯೆಯೇ ಸಾಕ್ಷಿ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಭಿಪ್ರಾಯಪಟ್ಟರು. 

ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಮರುದ್ದೀನ್ ಪಾಡಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಅಪ್ಪಣ್ಣ ಮಾಸ್ತರ್ ಮಾತನಾಡಿ, ಶಾಲೆಯ ಉತ್ತಮ ವಿದ್ಯಾರ್ಥಿಗಳಲ್ಲೋರ್ವಳಾಗಿದ್ದ ಮುಕಾಂಬಿಕಾ ಅವರು ಇಂದು ಇದೇ ಶಾಲೆಯಲ್ಲಿ ಉತ್ತಮ ಅಧ್ಯಾಪಿಕೆಯಾಗಿ ನಿವೃತ್ತಿಯಾಗುತ್ತಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. 

ಗ್ರಾಮಪಂಚಾಯಿತಿ ಸದಸ್ಯರುಗಳಾದ ಅನ್ನತ್ ಬೀವಿ, ಶ್ಯಾಮಪ್ರಸಾದ ಸರಳಿ, ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಕೆ., ಮಾತೃಸಂಘದ ಅಧ್ಯಕ್ಷೆ ಆಶಾಮೋಳ್, ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿ.ಸೋಜಾ, ಎಸ್.ಆರ್.ಜಿ.ಕನ್ವೀನರ್ ದಿನ ಕೆ. ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ತಾಹಿರಾ ಮಾಡತ್ತಡ್ಕ, ಮಾತೃಸಂಘದ ಉಪಾಧ್ಯಕ್ಷೆ ಶೀಬಾ ಉಪಸ್ಥಿತರಿದ್ದರು. ಸೇವೆಯಿಂದ ನಿವೃತ್ತರಾಗುತ್ತಿರುವ ಹಿಂದಿ ಶಿಕ್ಷಕಿ ಮುಕಾಂಬಿಕಾ ಕೆ. ಅವರನ್ನು ಸನ್ಮಾನಿಸಲಾಯಿತು. ಹಳೆವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಹಿತೈಷಿಗಳು ಉಡುಗೊರೆಯನ್ನು ನೀಡಿ ಅಭಿನಂದಿಸಿದರು. ಅಧ್ಯಾಪಿಕೆ ಅಖಿಲಾ ಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ ಸುಭಾಷ್ ಇ.ಕೆ. ವರದಿ ವಾಚಿಸಿದರು. ಶಶಿಕಲಾ ಪ್ರಾರ್ಥನೆ ಹಾಡಿದರು. ಮುಖ್ಯೋಪಾಧ್ಯಾಯ ಎ.ರಾಧಾಕೃಷ್ಣನ್ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಪ್ರಶಾಂತ ಕುಮಾರ್ ಬಿ.ವಂದಿಸಿದರು. ಅಧ್ಯಾಪಕರುಗಳಾದ ಅಬ್ದುಲ್ ಸಲಾಂ ಪಿ., ಶರತ್ ಕುಮಾರ್ ಎಂ. ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾಪ್ರದರ್ಶನಗಳು ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries