HEALTH TIPS

ವಿಚಾರಣೆ ಎದುರಿಸಲಿರುವ ಮಾರ್ಕ್ ಜುಕರ್‌ಬರ್ಗ್‌

ಲಾಸ್‌ ಏಂಜಲೀಸ್‌: ಮೆಟಾದಂಥ ಕಂಪನಿಗಳು ಪುಟ್ಟ ಮಕ್ಕಳನ್ನು ತಮ್ಮ ಮಾರುಕಟ್ಟೆಯ ಕೇಂದ್ರವಾಗಿಸಿಕೊಂಡು, ಅವರನ್ನು ತಮ್ಮ ಉತ್ಪನ್ನಗಳಿಗೆ ವ್ಯಸನಿಗಳಾಗುವಂತೆ ಮಾಡುತ್ತಿವೆ. ಇದರಿಂದ ಮಕ್ಕಳು ಮಾನಸಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೂಡಿದ್ದ ದಾವೆ ಸಂಬಂಧ ಮೆಟಾದ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರು ಸಾಕ್ಷ್ಯ ಹೇಳಲಿದ್ದಾರೆ.

ಕ್ಯಾಲಿಫೋನಿರ್ಯಾದ 20 ವರ್ಷದ ಈ ಮಹಿಳೆಯನ್ನು ಕೆ.ಜಿ.ಎಂ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಅಮೆರಿಕದ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಇರುವ ನೂರಾರು ಪ್ರಕರಣಗಳನ್ನು ಕ್ರೋಡೀಕರಿಸಿ, ಮಹಿಳೆಯ ಪ್ರಕರಣವನ್ನೇ ಮುಖ್ಯವಾಗಿಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಬುಧವಾರ ಜುಕರ್‌ಬರ್ಗ್‌ ಅವರ ವಿಚಾರಣೆ ನಡೆಯಲಿದೆ.

ಮಹಿಳೆಯು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌, ಟಿಕ್‌ಟಾಕ್‌ ಮತ್ತು ಯುಟ್ಯೂಬ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಟಿಕ್‌ಟಾಕ್‌ ಮತ್ತು ಸ್ನ್ಯಾಪ್‌ ಕಂಪನಿಗಳು ವಿಚಾರಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಮಹಿಳೆಯೊಂದಿಗೆ ಸಂಧಾನ ಮಾಡಿಕೊಂಡಿವೆ. ಮೆಟಾ ಮತ್ತು ಗೂಗಲ್‌ ಕಂಪನಿಗಳು ಮಾತ್ರವೇ ಈಗ ವಿಚಾರಣೆ ಎದುರಿಸಲಿವೆ.

ಈ ಹಿಂದೆ ಇಂಥದ್ದೇ ಪ್ರಕರಣವೊಂದರಲ್ಲಿ ವಿಚಾರಣೆ ವೇಳೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಜುಕರ್‌ಬರ್ಗ್‌ ಅವರು ದುಃಖತಪ್ತ ಪೋಷಕರ ಬಳಿ ಕ್ಷಮೆಯಾಚಿಸಿದ್ದರು. ನೂರಾರು ಪ್ರಕರಣಗಳನ್ನು ಕ್ರೋಡೀಕರಿಸಿಕೊಂಡು ವಿಚಾರಣೆ ನಡೆಸುತ್ತಿರುವುದರಿಂದ ಈ ಪ್ರಕರಣದ ತೀರ್ಪು ಬಹಳ ಪರಿಣಾಮಕಾರಿಯಾಗಿರಲಿದೆ. ತೀರ್ಪಿನ ವ್ಯಾಪ್ತಿಯ ಕಾರಣಕ್ಕೆ ಹೆಚ್ಚು ಪ್ರಭಾವಶಾಲಿಯೂ ಆಗಿರಲಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries