HEALTH TIPS

ಆದೂರು ಗೇರು ಸಂತತಿ ತೋಟದಲ್ಲಿ ಫಾರ್ಮ್ ಫೆಸ್ಟ್: ಸಾರ್ವಜನಿಕರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅವಕಾಶ

ಮುಳ್ಳೇರಿಯ:ಗಾಳಿಮುಖ ಗೇರುಬೀಜ ಸಂತತಿ ತೋಟದಲ್ಲಿ ಹಸಿರು ಉಡುಗೆ ತೊಟ್ಟ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನಾಗರಿಕರಿಗೆ ಸುವರ್ಣಾವಕಾಶ ಒದಗಿಸಲಾಗುತ್ತಿದೆ. ಸರಕಾರದ ಅಧೀನದಲ್ಲಿರುವ ಫಾರ್ಮ್‌ಗಳನ್ನು ಜನಪರಗೊಳಿಸಬೇಕೆಂಬ ಕೃಷಿ ಸಚಿವರ ನಿರ್ದೇಶ ಪ್ರಕಾರ ಈ ತಿಂಗಳ 28, ಮಾರ್ಚ್ 1, 2ರಂದು ವಿಪುಲವಾದ ಫಾರ್ಮ್ ಫೆಸ್ಟ್ ನಡೆಯಲಿದೆ. ಮೂರು ದಿನಗಳಲ್ಲಾಗಿ ನಡೆಯುವ ಈ ಕೃಷಿ ಪ್ರದರ್ಶನ ಮಾರಾಟಮೇಳ ಆದೂರು ಗಾಳಿಮುಖ ಪ್ರದೇಶಗಳಲ್ಲಾಗಿ ವ್ಯಾಪಿಸಿರುವ ಗೇರುತೋಟದ ಸೌಂದರ್ಯವನ್ನು ಸಾರ್ವಜನಿಕರಿಗೆ ಸಮೀಪದಿಂದ ಸವಿಯಲು ಅವಕಾಶ ಒದಗಿಸಲಿದೆ. 

ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ ಉದ್ಘಾಟಿಸುವರು. ಕಾರಡ್ಕ ಪಂ. ಅಧ್ಯಕ್ಷೆ ಎಂ. ಜನನಿ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ ೯ರಿಂದ ಸಂಜೆ 6 ಗಂಟೆವರೆಗೆ ಈ ದಿನಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶಿಸಬಹುದಾಗಿದೆ. ಗಾಳಿಮುಖದ ಉದಯಾಸ್ತಮಾನ ವಿಸ್ಮಯ ದೃಶ್ಯಗಳನ್ನು ನೋಡಲು ಸಾಧ್ಯವಾಗುವ ಮಾಯಿಲಾಂಕೋಟೆ ವ್ಯೂ ಪಾಯಿಂಟ್, ಅದಕ್ಕೆ ಸಂಬಂಧಿಸಿರುವ ಶೆಲ್ಟರನ್ನು ಫೆಸ್ಟ್‌ನಂಗವಾಗಿ ಉದ್ಘಾಟಿಸುವುದಾಗಿ ತಿಳಿದು ಬಂದಿದೆ. ಇಲ್ಲಿಂದ ಗುಣಮಟ್ಟವಿರುವ ಸಸಿಗಳನ್ನು, ನಾಟಿ ವಸ್ತುಗಳನ್ನು ನೇರವಾಗಿ ಖರೀದಿಸಲಿರುವ ಸೌಕರ್ಯ ಏರ್ಪಡಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries