ವಿಶಾಖಪಟ್ಟಣ: ಭಾರತೀಯ ನೌಕಾಪಡೆಯು ದೇಶದ ಕಡಲತೀರವನ್ನು ರಕ್ಷಿಸುವಲ್ಲಿ ಸದಾ ಸನ್ನದ್ಧವಾಗಿರುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಹೇಳಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮುದ್ರ ತೀರದಲ್ಲಿ ಯುದ್ಧನೌಕೆಯಲ್ಲಿ ನಡೆದ 'ಇಂಟರ್‌ನ್ಯಾಷನಲ್ ಫ್ಲೀಟ್ ರಿವ್ಯೂ' (ಐಎಫ್‌ಆರ್) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮುರ್ಮು ಅವರು ಮಾತನಾಡಿದರು.
ಜಗತ್ತಿನ ನೌಕಾಪಡೆಗಳೊಂದಿಗೆ ಉತ್ತಮ ಸಂಬಂಧ, ಸ್ನೇಹ, ಆತ್ಮವಿಶ್ವಾಸ ಹಾಗೂ ನಂಬಿಕೆಯ ಸೇತುವೆಯನ್ನು ನಿರ್ಮಿಸುವಲ್ಲಿ ಭಾರತೀಯ ನೌಕಾಪಡೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

