ಬದಿಯಡ್ಕ: ಪೆರಡಾಲ ನವಜೀವನ ವಿದ್ಯಾಲಯದ ವಾರ್ಷಿಕೋತ್ಸವ ಶನಿವಾರ ವಿದ್ಯಾಲಯದ ಆವರಣದಲ್ಲಿ ಜರಗಿತು. ಸಮಾರಂಭವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್ ಎನ್.ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಹೈಯರ್ ಸೆಕೆಂಡರಿ ವಿಭಾಗದ ನಿವೃತ್ತ ದೈಹಿಕ ಶಿಕ್ಷಕ ಶಿವಪ್ರಸಾದ್ ಯು.ಜಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪೆರಡಾಲ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಎಂ.ನಾರಾಯಣ ಭಟ್ ಹಾಗೂ ಕುಂಞÂಕೃಷ್ಣ ಎಂ. ಶುಭಹಾರೈಸಿದರು. ಮುಖ್ಯೋಪಾಧ್ಯಾಯಿನಿ ದಿವ್ಯಶ್ರೀ ಎನ್.ಎ.ವಾರ್ಷಿಕ ವರದಿ ಮಂಡಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ರೈ ಹಾಗೂ ಆಡಳಿತಾಧಿಕಾರಿ ವೆಂಕಟರಾಜ ಕಬೆಕ್ಕೋಡು ಉಪಸ್ಥಿತರಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭವ್ಯಶ್ರೀ ಪಿ.ಸ್ವಾಗತಿಸಿ, ಪೂರ್ಣಿಮಾ ಕೆ.ವಂದಿಸಿದರು. ಬಳಿಕ ವಿದ್ಯಾಲಯದ ಪುಟಾಣಿಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

.jpg)
