HEALTH TIPS

ನಿರ್ಮಾಣ ಕಾರ್ಮಿಕರ ನಿವೃತ್ತಿ ಸವಲತ್ತು, ಪಿಂಚಣಿ ಲಭ್ಯಗೊಳಿಸಲು ಎಐಟಿಯುಸಿ ಒತ್ತಾಯ

ಮಂಜೇಶ್ವರ: ನಿರ್ಮಾಣ ಕಾರ್ಮಿಕರ ಒಕ್ಕೂಟ ಮಂಜೇಶ್ವರ ಮಂಡಲ ಸಮಾವೇಶ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ನಿರ್ಮಾಣ ಕಾರ್ಮಿಕರ ಕ್ಷೇಮನಿಧಿ ಬೋರ್ಡ್‍ನಿಂದ 2025 ಏಪ್ರಿಲ್‍ನಿಂದ ಕಾರ್ಮಿಕರಿಗೆ ಲಭಿಸದ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಪಾವತಿಸಲು ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಲಾಯಿತು. 

ನಿರ್ಮಾಣ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಚಂದ್ರಶೇಖರ ಸಿಂತಾಜೆ ಅಧ್ಯಕ್ಷತೆ ವಹಿಸಿದರು. ಹಿರಿಯ ನಾಯಕ ಸಂಜೀವ ಶೆಟ್ಟಿಯವರನ್ನು ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗೌರವಿಸಿದರು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ಜಯರಾಮ ಬಲ್ಲಂಗುಡೇಲು, ರಾಮಚಂದ್ರ, ಮೋಟಾರು ಯೂನಿಯನ್ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರು, ಈಶ್ವರ ನಾಯ್ಕ್ ಮಾತನಾಡಿದರು. ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ, ಮಂಡಲ ಕಾರ್ಯದರ್ಶಿ ರಾಮದಾಸ್ ಕಡಂಬಾರು ಸ್ವಾಗತಿಸಿದರು. ನೂತನ ಪದಾಧಿಕಾರಿಗಳಾಗಿ ಚಂದ್ರಶೇಖರ ಸಿಂತಾಜೆ (ಅಧ್ಯಕ್ಷ), ಈಶ್ವರ ನಾಯ್ಕ್ (ಉಪಾಧ್ಯಕ್ಷ), ರಾಮದಾಸ್ ಕಡಂಬಾರು (ಕಾರ್ಯದರ್ಶಿ), ಕೊರಗಪ್ಪ (ಜೊತೆ ಕಾರ್ಯದರ್ಶಿ) ಹಾಗೂ 13 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries