ಉಪ್ಪಳ: ಪೈವಳಿಕೆ ಪಂಚಾಯಿತಿ ಕಯ್ಯಾರು ಕೆಳಗಿನ ಮನೆ ಪ್ರಕಾಶ್ ರೈ ಎಂಬವರ ಮನೆ ಸನಿಹದ ಶೆಡ್ಡಿಗೆ ಬೆಂಕಿ ತಗುಲಿದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಶೆಡ್ಡಿಗೆ ಬೆಂಕಿತಗುಲಿ ಉರಿದು ಸನಿಹ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಹಾಗೂ ಶೆಡ್ಡಿನೊಳಗಿದ್ದ ಇನ್‍ವರ್ಟರ್, ಪ್ಲಂಬಿಂಗ್ ಸಾಮಗ್ರಿ, ಮರಮಟ್ಟುಗಳೂ ಉರಿದು ಹಾನಿಗೀಡಾಗಿದೆ.
ಭಾನುವಾರ ನಸುಕಿಗೆ ಎದ್ದೇಳುತ್ತಿದ್ದಂತೆ ಬೆಂಕಿತಗುಲಿ ಹಾನಿಗೊಂಡಿರುವುದು ಗಮನಕ್ಕೆಬಂದಿರುವುದಾಗಿ ಪ್ರಕಾಶ್ ರೈ ತಿಳಿಸಿದ್ದಾರೆ. ಗ್ರಾಮಾಧಿಕಾರಿ, ಕುಂಬಳೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

