ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ನಯಾಬಜಾರಿನಲ್ಲಿ ತಂಟವೊಂದು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ ಪರಿಣಾಮ ಐಲ ನಿವಾಸಿ ಹನೀಫ ಯಾನೆ ಬಿಜೆಪಿ ಹನೀಫಾ ಗಂಭೀರ ಗಾಯಗೊಮಡಿದ್ದು, ಇವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಹನೀಫಾ ಅವರನ್ನು ತಡೆದುನಿಲ್ಲಿಸಿದ ಮೂರು ಮಂದಿಯ ತಂಡ ಕಬ್ಬಿಣದ ಸಲಾಕೆ ಸೇರಿದಂತೆ ಮರಕಾಯುಧಗಳಿಂದ ತಲೆಗೆ ಬಡಿದಿದ್ದು, ಇದರಿಂದ ಹನೀಫಾ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹನೀಫಾ ಅವರು ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇವರು ಬಿಜೆಪಿಹನೀಫಾ ಎಂದು ಗುರುತಿಸಲ್ಪಟ್ಟಿದ್ದರು. ಪ್ರಕರಣದ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡು ತನಿಖೆ ನಡೆಸುತ್ತಿದ್ದಾರೆ.

