ಮಂಜೇಶ್ವರ: ತುಳುವೆರೆ ಜಾಲ್ ಕಣ್ವತೀರ್ಥ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕøತಿಕ ಸೇವಾಕೂಟ ಮತ್ತು ಶ್ರೀ ಮಾತಾ ಕಲಾಮಂದಿರ ವೈಶಾಲಿ ಕುಂಜತ್ತೂರ್ ಸಹಯೋಗದೊಂದಿಗೆ ಭಾನುವಾರ ಶ್ರೀ ಮಾತಾ ಕಲಾ ಮಂದಿರದಲ್ಲಿ 16 ವರ್ಷದ ಒಳಗಿನ ಮಕ್ಕಳ ಬಹುಭಾಷಾ ಕವಿ ಗೋಷ್ಠಿ ಮತ್ತು ಕಬಿತೆ ಪುಟ್ಟುನ ಗುಟ್ಟೆಂಚ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಧೀರಜ್ ಕಣ್ವತೀರ್ಥ ಮತ್ತು ನಿಶಿತ ಇವರ ಪುತ್ರಿ ಮೈನವಿ ದೀಪ ಬೆಳಗಿಸಿ ಉದ್ಘಾಟಿಸಿದಳು. ಕಲೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದ ಕುಮಾರಿ ರಶ್ಮಿತಾ ಕುಲಾಲ್ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತಡ್ಕ ಕಬಿತೆ ಪುಟ್ಟುನ ಗುಟ್ಟೆಂಚ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಕ್ಕಳ ಮನಸ್ಸಿನಲ್ಲಿ ಕವಿತೆ ಹುಟ್ಟುವ ದಾರಿ, ವಿಷಯ, ಆ ವಿಷಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕವಿತೆಯನ್ನು ಹೆಣೆಯುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ತುಳುವೆರೆ ಚಾವಡಿ ಬೆಂಗಳೂರು ಜೋಕುಲೆ ಉಜ್ಜಾಲ್ ಕೃತಿ ಸಂಕಲನ ಕೂಟದ ಸುಧಾ ನಾಗೇಶ್ ಇವರು ತುಳುವೆರೆ ಜಾಲ್ ಕಣ್ವತೀರ್ಥ ಕೂಟವು ಮಕ್ಕಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಾಗಿ ನೀಡುತ್ತಿರುವ ಸಹಕಾರಕ್ಕೆ ಒತ್ತು ನೀಡುವಂತೆ ಹೇಳಿದರು. ನಿವೃತ್ತ ಶಿಕ್ಷಕಿ ಮಾತಾ ಕಲಾಮಂದಿರದ ಮುಖ್ಯಸ್ಥೆ ಚಂದ್ರಿಕಾ ಟೀಚರ್ ಮಾತನಾಡಿದರು. ತುಳುವೆರೆ ಚಾವಡಿ ಬೆಂಗಳೂರು ಇವರು ಬಿಡುಗಡೆ ಮಾಡಿದ ಜೋಕುಲೆ ಉಜ್ಜಲು ಕೃತಿಯ ಮೇಲೆ ಅಂಗನವಾಡಿ ಮಕ್ಕಳಿಗಾಗಿ ನಡೆದ ತುಳು ಪದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈ ತುಳುನಾಡು ಕಾಸರಗೋಡು ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು, ರಾಮಾಂಜನೇಯ ಸೇವಾ ಸಮಿತಿ ಕಣ್ವತೀರ್ಥ ಅಧ್ಯಕ್ಷೆ ಪ್ರೇಮ ಎಂ. ಪೆÇಣ್ಣೆ, ಸುನಿಲ್ ರಾಮಾಡಿ, ಚಿತ್ರಕಲಾ ಮಾಡೂರು, ಶೋಭಿತ ಕಣ್ವತೀರ್ಥ, ಪ್ರವೀಣ್ ಮಾಡ ಸಹಕರಿಸಿದರು. ಕಾರ್ಯಕ್ರಮದಲ್ಲಿ 10 ಕಿರು ಕವಿತೆಗಳನ್ನು ಪುಟ್ಟ ಮಕ್ಕಳು ವಾಚನಗೈದರು. ನಳಿನಿ ಬೆಂಗಳೂರು ಸ್ವಾಗತಿಸಿ, ನಿಶ್ಚಿತ್ ಕಡಬ ವಂದಿಸಿದರು. ಸ್ಪೂರ್ತಿ ಕುಂಜತೂರು ಕಾರ್ಯಕ್ರಮ ನಿರೂಪಿಸಿದರು.



