ಮುಳ್ಳೇರಿಯ: ಮವ್ವಾರು ಶ್ರೀ ಷಾಡನನ ಯೂತ್ ಕ್ಲಬ್ ಹಾಗೂ ಗ್ರಂಥಾಲಯದಲ್ಲಿ ರಿಪಬ್ಲಿಕ್ ಸಮಾವೇಶ (ಸದಸ್) ಹಾಗೂ ವಿದ್ಯಾರ್ಥಿಗಳಿಗೆ ಕ್ವಿಜ್ ಸ್ವರ್ಥೆ ನಡೆಯಿತು.
ಕ್ಲಬ್ ಸಭಾಂಗಣದಲ್ಲಿ ನಡೆದದ ಕಾರ್ಯಕ್ರಮವನ್ನು ಕುಂಬ್ಡಾಜೆ ಗ್ರಂಥಾಲಯದ ನೇತೃತ್ವ ಸಮಿತಿ ಸಂಚಾಲಕ ಪ್ರಶಾಂತ್ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಂವಿಧಾನದ ಮಹತ್ವ ಹಾಗೂ ಅದರ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಅಧ್ಯಕ್ಷ ಕೆ.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಉಪಾಧ್ಯಕ್ಷ ಎ. ವಿಷ್ಣು ಭಟ್, ಸದಸ್ಯರಾದ ಕೃಷ್ಣಮೂರ್ತಿ, ವಿ. ಗಣಪತಿ ಭಟ್, ಶ್ಯಾಮಲ ಕುಮಾರಿ, ಪೂರ್ಣಿಮಾ, ಗ್ರಂಥಪಾಲಕಿ ವಿದ್ಯಾಶಂಕರಿ, ಮವ್ವಾರು ಎಯುಪಿ ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಗ್ರಂಥಾಲಯ ಪ್ರಧಾನ ಕಾರ್ಯದರ್ಶಿ ಚಾತುಕುಟ್ಟಿ ಮಾಸ್ತರ್ ಸ್ವಾಗತಿಸಿ, ಕೃಷ್ಣಮೂರ್ತಿ ಭಟ್ ವಂದಿಸಿದರು.
ಕಾರ್ಯಕ್ರಮದಂಗವಾಗಿ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಾಂತ್ ಅವರು ಬಹುಮಾನ ವಿತರಿಸಲಾಯಿತು. ಇದೇ ವೇಳೆ ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ನೇತೃತ್ವದಲ್ಲಿ ಕೊಡ ಮಾಡಿದ ಉಚಿತ ಪುಸ್ತಕ ವಿತರಣೆಯನ್ನು ಗ್ರಂಥಾಲಯದ ಪ್ರಧಾನ ಕಾರ್ಯದರ್ಶಿ ಚಾತುಕುಟ್ಟಿ ಮಾಸ್ತರ್ ಅವರಿಗೆ ಹಸ್ತಾಂತರಿಸಲಾಯಿತು.

.jpg)
