HEALTH TIPS

ರಸ್ತೆ ಬದಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸಿ ಮಾದರಿಯಾದ ನವೋದಯ ಪ್ರೆಂಡ್ಸ್ ಕ್ಲಬ್

ಕುಂಬಳೆ:  ಶಾಂತಿಪಳ್ಳದಿಂದ ಭಾಸ್ಕರ ನಗರ ವರೆಗೆ ರಸ್ತೆ ಬದಿಗಳಲ್ಲಿ  ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ವಿವಿಧ ತ್ಯಾಜ್ಯಗಳನ್ನು  ಭಾಸ್ಕರನಗರದ ನವೋದಯ ಪ್ರೆಂಡ್ಸ್ ಕ್ಲಬ್ ಕಾರ್ಯ ಕರ್ತರು ತೆರವುಗೊಳಿಸಿ ಶುಚೀಕರಣ ನಡೆಸಿ ಮಾದರಿಯಾಗಿದ್ದಾರೆ. 

ಶುಚೀಕರಣ ಕಾರ್ಯದಲ್ಲಿ ನಾಗರಿಕರೂ ಪಾಲ್ಗೊಂಡರು. ಇದೇ ರೀತಿಯಲ್ಲಿ ನಾಡಿನ ಎಲ್ಲಾ ಕ್ಲಬ್‍ಗಳು ಶುಚೀಕರಣಕ್ಕೆ ಮುಂದಾದರೆ ವಿವಿಧೆಡೆ ಎಸೆಯಲಾದ ತ್ಯಾಜ್ಯಗಳು ಪೂರ್ಣವಾಗಿ ತೆರವುಗೊಂಡು ನಾಡು ನೆಮ್ಮದಿಪಡಲಿದೆಯೆಂದು ಕ್ಲಬ್‍ನ ಕಾರ್ಯಕರ್ತರು ತಿಳಿಸಿದ್ದಾರೆ. ಕ್ಲಬ್‍ನ ಕಾರ್ಯಕರ್ತರು ನಡೆಸಿದ ಈ ಮಾದರಿ ಕಾರ್ಯವನ್ನು ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಾಜಿ ಅಭಿನಂದಿಸಿದ್ದಾರೆ.  ಮನೆಗಳು, ವ್ಯಾಪಾರ ಸಂಸ್ಥೆಗಳ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟು ಭಾರೀ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಬ್‍ನ ಕಾರ್ಯಕರ್ತರು ಶುಚೀಕರಣ ಕಾರ್ಯ ನಡೆಸಿದ್ದಾರೆ. ಅಲ್ಲದೆ ನಾಡನ್ನು ಶುಚಿಯಾಗಿ ಸಂರಕ್ಷಿಸಲು ನಾಗರಿಕರು ಮುಂದೆಬರಬೇಕೆಂದು ವಿನಂತಿಸಿ ಕ್ಲಬ್ ಕಾರ್ಯ ಕರ್ತರು ಪೋಸ್ಟರ್ ಸ್ಥಾಪಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries