ಮಂಜೇಶ್ವರ: ಮೀಂಜ ಪಂಚಾಯತಿ ಸಮಿತಿಯಿಂದ 22 ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಬೆಳಿಗ್ಗೆ ಚಿಗುರುಪಾದೆ ಮೊಗೇರ ದೈವಸ್ಥಾನದಿಂದ ಹೊರಟು ಮೀಂಜ ಪಂಚಾಯತಿಯ ಎಲ್ಲಾ ಕೇಂದ್ರಗಳಿಗೆ ಪ್ರಮುಖ ಮಾರ್ಗಗಳಲ್ಲಿ ದ್ವಿಚಕ್ರವಾಹನ ಪ್ರಚಾರ ಜಾಥಾ ನಡೆಯಿತು. ದುರ್ಗಿಪಳ್ಳ ಚೌಕಾರು ಗುಳಿಗ ದೈವಸ್ಥಾನದ ಎದುರು ಸಮಾರೋಪಗೊಂಡಿತು.
ಬೆಳಿಗ್ಗೆ ಮೊಗೇರ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಸಮಿತಿ ಸದಸ್ಯರುಗಳಾದ ನಾರಾಯಣ ಸಿ., ಶಂಕರ ಸಿ. ಮತ್ತು ಭಗಿನಿ ಶ್ರಾವ್ಯ ಇವರು ಸಮಾಜೋತ್ಸವ ಸಮಿತಿ ಸದಸ್ಯರುಗಳಾದ ಹರೀಶ ಮೀಯಪದವು, ಯಜ್ಞೇಶ ಬೇರಿಕೆ, ಪ್ರೀತಿ ನಿಶಾಂತ್ ರೈ ಅವರಿಗೆ ಓಂಕಾರ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೌರವ ಸಲಹೆಗಾರ ಪದ್ಮನಾಭ ರೈ ಉಂಬಲ್ತೋಡಿ, ಉಪಾಧ್ಯಕ್ಷ ಉದಯ ಶಂಕರ ಬಳ್ಳಕ್ಕುರಾಯ ಕುಳೂರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಜೇಶ್ವರ ತಾ. ಸಂಘಚಾಲಕ ಸದಾಶಿವ ಭಟ್ ಮೀಯಪದವು,ಸಾಮಾಜಿಕ ಕಾರ್ಯಕರ್ತ ಹರಿಶ್ಚಂದ್ರ ಮಂಜೇಶ್ವರ ಮುಂತಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಹಿರಿಯರಾದ ರಾಮಚಂದ್ರ ರಾವ್ ಸಹಿತ ಮಾತೆಯರು, ಭಗಿನಿಯರು, ತರುಣರು 115 ದ್ವಿಚಕ್ರ ವಾಹನದಲ್ಲಿ ಜಾಥಾದಲ್ಲಿ ಪಾಲ್ಗೊಂಡರು.


