ಜಮ್ಮು: ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ಗೆ ಆರನೇ ಶೆಡ್ಯೂಲ್ ಅಥವಾ ರಾಜ್ಯದ ಸ್ಥಾನಮಾನ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಡಿಸಿದೆ. ದೆಹಲಿಯಲ್ಲಿ ಕಳೆದ ವಾರ ಈ ಭಾಗದ ಎರಡು ಪ್ರಮುಖ ರಾಜಕೀಯ ಸಂಘಟನೆಗಳಾದ ಲೆಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮೋಕ್ರಟಿಕ್ ಪಾರ್ಟಿಯ ಮುಖಂಡರ ಜತೆ ನಡೆಸಿದ ಮಾತುಕತೆಯ ವೇಳೆ ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಭಾರತದ ಸಂವಿಧಾನದ ಆರನೇ ಶೆಡ್ಯೂಲ್ ಅನ್ವಯ ಬುಡಕಟ್ಟು ಪ್ರದೇಶಗಳ ಸ್ವಾಯತ್ತತೆ, ಸಂಸ್ಕøತಿ ಹಾಗೂ ಭೂಪ್ರದೇಶವನ್ನು ಕಾಪಾಡುವ ಸಲುವಾಗಿ ವಿಶೇಷ ಆಡಳಿತಾತ್ಮಕ ವ್ಯವಸ್ಥೆಗೆ ಅವಕಾಶವಿದೆ. ಗೃಹ ಸಚಿವಾಲಯದ ಉನ್ನತ ಸಮಿತಿಯ ಜತೆಗೆ ಫೆಬ್ರುವರಿ 4ರಂದು ನಡೆದ ಮಾತುಕತೆಯ ವಿವರಗಳನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ ಲಡಾಖ್ ಮುಖಂಡರು, "ಪ್ರಾದೇಶಿಕ ಮಂಡಳಿ" ಮಾದರಿಯನ್ನು ಮಂಜೂರು ಮಾಡಲು ಕೇಂದ್ರ ಮುಂದಾಗಿದೆ ಎಂದು ವಿವರಿಸಿದರು.
ಈ ಪ್ರಸ್ತಾವದ ಅನ್ವಯ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ (ಎಲ್‌ಎಎಚ್ಡಿಸಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸಿಎಂ ಹಾಗೂ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಉಪ ಮುಖ್ಯಮಂಯತ್ರಿ ಎಂದು ನಿಯೋಜಿಸಲಾಗುತ್ತದೆ.
"ನಾವು ಇದನ್ನು ಪ್ರಹಸನ ಎಂದು ಕರೆಯುತ್ತೇವೆ. ಕೆಡಿಎ ಸದಸ್ಯೆ ಕುನ್ಝೆನ್ಸ್ ಡೋಲ್ಮಾ ಹೊರತುಪಡಿಸಿ ಎಲ್‌ಎಬಿ ಮತ್ತು ಕೆಡಿಎ ಈ ಪ್ರಸ್ತಾವನೆಯನ್ನು ತಿರಸ್ಕರಿಸುತ್ತದೆ" ಎಂದು ಕೆಡಿಎ ಸಹ ಅಧ್ಯಕ್ಷ ಅಸ್ಗರ್ ಅಲಿ ಕಾರ್ಬೈಲ್ ವಿವರಿಸಿದ್ದಾರೆ.
ಡೊಲ್ಮಾ ಈ ಮೊದಲು ಕೆಡಿಎ ಕಾರ್ಯಸೂಚಿಯನ್ನು ಬೆಂಬಲಿಸಿದ್ದರು ಹಾಗೂ ಅವರನ್ನು ಮಾತುಕತೆಗೆ ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಆಕೆಯನ್ನು ಕಿತ್ತುಹಾಕಲು ಪಿತೂರಿ ನಡೆದಿದೆ ಎಂದು ಉನ್ನತ ಮಟ್ಟದ ಸಮಿತಿಗೆ ತಿಳಿಸಿದ ಅವರು, ಲಡಾಖ್ಗೆ ನೀಡಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದಲ್ಲಿ ತಮಗೆ ತೃಪ್ತಿ ಇದೆ ಎಂದು ಅವರು ಹೇಳಿದ್ದಾಗಿ ಕರ್ಬಾಲಿ ತಿಳಿಸಿದ್ದಾರೆ.

