HEALTH TIPS

ಚಿನ್ಮಯ ಅಮೃತ ಮಹೋತ್ಸವ: ವಿವಿಧ ಕಾರ್ಯಕ್ರಮ ಇಂದು

 ಕಾಸರಗೋಡು:  ಚಿನ್ಮಯ ಮಿಷನ್‌ನ 25ನೇ ವಾರ್ಷಿಕವನ್ನು ಅಮೃತ ಮಹೋತ್ಸವವಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ಇಂದು ವಿದ್ಯಾನಗರ ಕ್ಯಾಂಪಸ್‌ನಲ್ಲಿ ಸಾಮೂಹಿಕ ಹನುಮಾನ್ ಚಾಲೀಸ ಹವನ, ಭಗವದ್ಗೀತೆ ಸಮೂಹ ಪಾರಾಯಣ, ಚಿನ್ಮಯ ಮಿಷನ್ ನಿರ್ಮಿಸಿ ನೀಡುವ ೯ನೇ ಮನೆಯ ಕೀಲಿ ಕೈ ಹಸ್ತಾಂತರ, ಚಿನ್ಮಯ ಅಮೃತಯಾತ್ರ ಸ್ವಾಗತ ಕಾರ್ಯಕ್ರಮ ಎಂಬಿವು ನಡೆಯಲಿದೆ. ಚಿನ್ಮಯ ಮಿಷನ್‌ನ ೭೫ನೇ ವಾರ್ಷಿಕವನ್ನು ವಿಶ್ವದಾದ್ಯಂತ ಆಚರಿಸುವುದರಂಗವಾಗಿ ಜಿಲ್ಲೆಯಲ್ಲಿ ಕಾಸರಗೋಡು, ಬದಿಯಡ್ಕ, ಪೊಯಿನಾಚಿ, ಕಾಞಂಗಾಡ್, ನೀಲೇಶ್ವರ ಕೇಂದ್ರಗಳು ಜಂಟಿಯಾಗಿ ನಾಳೆ ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಸಲಿದೆ. ಬೆಳಿಗ್ಗೆ 10 ಗಂಟೆಯಿಂದ 108 ಹೋಮಕುಂಡಗಳಲ್ಲಾಗಿ ನಡೆಯುವ ಹವನಕ್ಕೆ  ತಿರುವನಂತಪುರ ಚಿನ್ಮಯ ಮಿಷನ್ ಆಚಾರ್ಯ ಬ್ರಹ್ಮಾಚಾರಿ ಸುಧೀರ್ ಚೈತನ್ಯ ಪೌರೋಹಿತ್ಯ ವಹಿಸುವರು. ಎಡನೀರು ಮಠಾಧೀಶ  ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ ಭಾಗವಹಿಸುವರು. ಭಗವದ್ಗೀತೆಯ ೧೫ನೇ ಅಧ್ಯಾಯ, ಗೀತ ಪಂಚಾ ಮೃತಂ ಎಂಬಿವುಗಳ ಸಾಮೂಹಿಕ ಪಾರಾಯಣ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries