ಬದಿಯಡ್ಕ: ಉರ್ಮಿ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಮುಗು-ಉರ್ಮಿ-ಪೊನ್ನಂಗಳ- ಪಾಡ್ಲಡ್ಕ ಪಿಡಬ್ಲ್ಯುಡಿ ರಸ್ತೆ ಫೆ.11 ರಿಂದ ಸಂಪೂರ್ಣ ಸಂಚಾರ ನಿಯಂತ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಡಿತ್ತಡ್ಕಕ್ಕೆ ತೆರಳುವ ಬಸ್ ಸಹಿತ ವಾಹನಗಳು ಸೀತಾಂಗೋಳಿಯಿಂದ ಕನ್ನೆಪ್ಪಾಡಿ ಮೂಲಕ ಪಾಡ್ಲಡ್ಕ-ಪಳ್ಳ ಜಂಕ್ಷನ್‍ನಿಂದ ತೆರಳಬಹುದು ಎಂದು ಕಾಸರಗೋಡಿನ ಸಹಾಯಕ ಪಿಡಬ್ಲ್ಯುಡಿ ಸೇತುವೆ ವಿಭಾಗದ ಉಪವಿಭಾಗದ ಮಾಹಿತಿ ನೀಡಿದೆ.

