HEALTH TIPS

'ಇಂಡಿಯಾ' ಮೈತ್ರಿಕೂಟವನ್ನು ಮಮತಾ ಬ್ಯಾನರ್ಜಿ ಮುನ್ನಡೆಸಬೇಕು: ಮನಮೋಹನ್ ಸಿಂಗ್‌ರ ಮಾಜಿ ಸಲಹೆಗಾರ

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಕ್ಷ ಮೈತ್ರಿಕೂಟ 'ಇಂಡಿಯಾ'ವನ್ನು ಮುನ್ನಡೆಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಹೇಳಿದ್ದಾರೆ.

''ಪ್ರಸಕ್ತ ಒಂದು ರಾಜಕೀಯ ಪಕ್ಷ ಮತ್ತು ಸರಕಾರವೊಂದರ ಮುಖ್ಯಸ್ಥರಾಗಿರುವ ಏಕೈಕ ಮಹಿಳೆಯಾಗಿರುವ ಮಮತಾ ಬ್ಯಾನರ್ಜಿ, ರಾಷ್ಟ್ರ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಹಾಲಿ ತಲೆಮಾರಿನ ನಾಯಕರಿಗಿಂತ ಭಿನ್ನವಾಗಿದ್ದಾರೆ'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ''ಸಂಪೂರ್ಣವಾಗಿ ಸ್ವಂತ ಪರಿಶ್ರಮದಿಂದ ರೂಪುಗೊಂಡಿರುವ ಮೊದಲ-ತಲೆಮಾರಿನ ನಾಯಕಿ''ಯಾಗಿದ್ದಾರೆ ಎಂಬುದಾಗಿ ಬಣ್ಣಿಸಿರುವ ಸಂಜಯ ಬಾರು, ''ಸೋನಿಯಾ ಗಾಂಧಿ-ಮನಮೋಹನ್ ಸಿಂಗ್ ಮಾದರಿಯನ್ನು ರಾಹುಲ್ ಗಾಂಧಿ-ಮಲ್ಲಿಕಾರ್ಜುನ ಖರ್ಗೆ ಮೂಲಕ ಪನರಾವರ್ತಿಸಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ'' ಎಂದು ಅವರು 'ಟೆಲಿಗ್ರಾಫ್' ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಲೇಖನವನ್ನು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries