HEALTH TIPS

ರೈಲು ಬೋಗಿಯಲ್ಲ ಇದು ಮನೆ! ಮಗನ ರೈಲ್ವೆ ಕೆಲಸವನ್ನು ಗೌರವಿಸಲು ಮನೆಗೆ ಬೋಗಿಯಂತೆ ಬಣ್ಣ ಬಳಿದ ತಂದೆ

ಜೈಪುರ: ಪ್ರತಿಯೊಬ್ಬರಿಗೂ ಉದ್ಯೋಗ ಅನ್ನೋದು ಮುಖ್ಯವಾಗುತ್ತದೆ‌. ಕೆಲಸ ಸಿಕ್ಕಾಗ ಖುಷಿ ಪಡುವ ಮೊದಲೇ ವ್ಯಕ್ತಿ ಪೋಷಕರೇ ಆಗಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನದ (Rajasthan) ಗ್ರಾಮೀಣ ಪ್ರದೇಶದಲ್ಲಿ ತಂದೆಯೊಬ್ಬರು ತಮ್ಮ ಮಗನಿಗೆ ಸಿಕ್ಕ ಕೆಲಸ ಮತ್ತು ಆತನ ಸಾಧನೆಯ ಸಂಭ್ರಮವನ್ನು ವ್ಯಕ್ತಪಡಿಸಿದ ರೀತಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.


ತನ್ನ ಮಗನ ರೈಲ್ವೆ ಕೆಲಸವನ್ನು ಗೌರವಿಸಲು ತಂದೆ ಮನೆಯನ್ನು ರೈಲಿನ ಬೋಗಿಯನ್ನಾಗಿ ಬದಲಾಯಿಸಿದ್ದಾರೆ.

ತನ್ನ ಮಗನಿಗೆ ರೈಲ್ವೆಯಲ್ಲಿ ಕೆಲಸ ಸಿಕ್ಕಿದ್ದನ್ನು ಆಚರಿಸಲು ತಂದೆಯೊಬ್ಬರು ಮನೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ತನ್ನ ಮನೆಯನ್ನು ರೈಲು ಬೋಗಿಯಂತೆ ಅವರು ಮರು ವಿನ್ಯಾಸಗೊಳಿಸಿದ್ದಾರೆ. ನೀಲಿ ಮತ್ತು ಬಿಳಿ ಬಣ್ಣದಲ್ಲಿ ಚಿತ್ರಿಸಲಾದ ಈ ಕಟ್ಟಡವು ರೈಲ್ವೆ ಕೋಚ್ ರೀತಿಯನ್ನೇ ಹೋಲುತ್ತದೆ. ಭಾರತೀಯ ರೈಲ್ವೆ ಬೋಗಿಗಳಂತೆ ಗೋಡೆಯನ್ನು ನೀಲಿ, ಬಿಳಿ ಮತ್ತು ಹಳದಿ ಬಣ್ಣಗಳಲ್ಲಿ ಚಿತ್ರಿಕರಿಸಲಾಗಿದೆ. ಚಕ್ರಗಳಂತೆ ಕಾಣುವಂತೆ ಕೆಳಗಿನ ಭಾಗದಲ್ಲಿ ಎರಡು ದೊಡ್ಡ ಕಪ್ಪು ಆಕಾರಗಳನ್ನು ರಚಿಸಲಾಗಿದೆ.

ತನ್ನ ಮಗನಿಗೆ ರೈಲ್ವೆಯಲ್ಲಿ ಕೆಲಸ ಸಿಕ್ಕಿದ್ದನ್ನು ಗೌರವಿಸಲು ಹೆಮ್ಮೆಯ ತಂದೆಯೊಬ್ಬರು ಈ ರೀತಿಯಾಗಿ ಮೇಕ್ ಓವರ್ ಮಾಡಿದ್ದಾರೆ. ಈ ಮನೆಯ ಹತ್ತಿರ ಹಾದುಹೋಗುವ ಜನರು ಇಲ್ಲಿ ನಿಂತು ನೋಡದೆ ಇರಲು ಸಾಧ್ಯವೇ ಇಲ್ಲ. ಅದೇ ರೀತಿ ರೈಲಿನ ಗುರುತಿನ ಸಂಖ್ಯೆಯಂತೆಯೇ ಮೇಲ್ಭಾಗದಲ್ಲಿ "9798866278" ಸಂಖ್ಯೆಯನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ.

ಛಾವಣಿಯು ಲೋಹದ ಹಾಳೆಗಳಿಂದ ಮಾಡಲ್ಪಟ್ಟಿದೆ ಮತ್ತು ಮನೆಯ ಸುತ್ತಲೂ ಕೆಲವು ಮರಗಳು ಕೂಡ ಆಕರ್ಷಕವಾಗಿ ಬದಲಾಯಿಸಲಾಗಿದೆ. ಈ ವಿಡಿಯೊವನ್ನು ಫೆಬ್ರವರಿ 3ರಂದು ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ 19.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಜತೆಗೆ ಸಾವಿರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಒಬ್ಬರು, "ತಂದೆಯರು ಪ್ರೀತಿ ತೋರಿಸುವುದು ಹೀಗೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಒಂದು ವೇಳೆ ಮಗ ಡಾಕ್ಟರ್ ಆಗಿದ್ದರೆ ಇಡೀ ಮನೆಯನ್ನು ಆಸ್ಪತ್ರೆಯಂತೆ ಮಾಡುತ್ತಿದ್ದರುʼʼ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries