ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಸಂದರ್ಭ ಪುಷ್ಪ ಶೆಟ್ಟಿಗಾರ್ ಬೇರಿಕೆಯವರ ನೇತೃತ್ವದಲ್ಲಿ ರಾತ್ರಿ ಶ್ರೀ ಮಹಾಲಿಂಗೇಶ್ವರ ನೃತ್ಯ ತಂಡ ಚಿಗುರುಪಾದೆ ಇದರ ಸದಸ್ಯರಿಂದ ನೃತ್ಯ ವೈವಿಧ್ಯ ಜರಗಿತು. ಈ ಸಂದರ್ಭ ಪುಷ್ಪರಾಜ ಶೆಟ್ಟಿ ತಲೇಕಳ ಅವರ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ ವತಿಯಿಂದ ವಿವಿಧ ಕುಣಿತ ಭಜನಾ ಸಂಘಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ ತಂಡದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು, ರಾಮಕೃಷ್ಣ ಸಂತಡ್ಕ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕ್ಯಾಂಪ್ಕೋ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಸೌಮ್ಯಪ್ರಕಾಶ ಮದಂಗಲ್ಲು ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

.jpg)
