ಮಂಜೇಶ್ವರ: ಜನಪರ, ಸ್ತ್ರೀಪರವಾದ ಎಡರಂಗ ಸರ್ಕಾರವು ಮೂರನೇ ಅವಧಿಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೇರುವಾಗ ಮಂಜೇಶ್ವರ ಮಂಡಲದಲ್ಲಿಯೂ ಎಡರಂಗದ ಶಾಸಕರನ್ನು ಆಯ್ಕೆ ಮಾಡಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿಪಿ ಬಾಬು ಹೇಳಿದರು.
ಕೆ.ಅರ್.ಜಯಾನಂದ ನೇತೃತ್ವದ ಮಂಜೇಶ್ವರ ಮಂಡಲ ಎಡರಂಗ ವಾಹನ ಪ್ರಚಾರ ಜಾಥಾದ ಸಮಾರೋಪ ಕಾರ್ಯಕ್ರಮವನ್ನು ಮಜೀರ್ಪಳ್ಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
62 ಲಕ್ಷ ಮಂದಿಗೆ 2000 ರೂ ವಂತೆ ಪಿಂಚಣಿ, ಮಹಿಳಾ ಸುರಕ್ಷಾ ಕಾರ್ಯಕ್ರಮದ ಭಾಗವಾಗಿ 35 ಲಕ್ಷ ಮಹಿಳೆಯರಿಗೆ 1000 ರೂ. ಆರ್ಥಿಕ ನೆರವು, ವಿದ್ಯಾರ್ಥಿ ಯುವಜನರಿಗೆ 1000 ರೂ.ವನ್ನು ಸಿ.ಎಂ.ಕನೆಕ್ಟ್ ಟು ವರ್ಕ್ ಮುಖಾಂತರ ನೀಡಲಾಗುತ್ತಿದೆ ಎಂದರು. ಕಳೆದ 10 ವರ್ಷ ಲೋಡ್ ಶೆಡ್ಡಿಂಗ್ ಇಲ್ಲದೆ, ನಿರಂತರ ವಿದ್ಯುತ್ ವಿತರಣೆ ಮೂಲಕ ಬೆಳಕಿನ ರಾಜ್ಯವನ್ನಾಗಿಸಿದ ಎಡರಂಗ ಸರ್ಕಾರ 5 ಲಕ್ಷ ಮನೆ ನಿರ್ಮಿಸಿ ಲೋಕ ದಾಖಲೆ ನಿರ್ಮಿಸಿದೆ. ಅಂಗನವಾಡಿ ಶಾಲಾ ಮಕ್ಕಳಿಗೆ ಪೋಷಕಾಂಶವಿರುವ ಆಹಾರ ವಿತರಣೆ, ಶಾಲೆ ಪ್ರಾರಂಭಗೊಳ್ಳುವ ಮುನ್ನವೇ ಪುಸ್ತಕ ವಿತರಣೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಜೊತೆಗೆ ಜಗತ್ತು ಕಂಡ ಅತ್ಯತ್ತಮ ಆರೋಗ್ಯ ಶೃಂಖಲೆ ನಿರ್ಮಾಣ ಕೇರಳವು ದಾಖಲೆ ಉಂಟುಮಾಡಿದೆ. ಹತ್ತು ವರ್ಷ ಕೇರಳವನ್ನು ಕೋಮು ಗಲಭೆ ಇಲ್ಲದ ರಾಜ್ಯವನ್ನಾಗಿಸಿ ಕತ್ತಲೆಯಿಂದ ಪ್ರಕಾಶ ಪೂರ್ಣ ಬೆಳಕಿನಡೆಗೆ ಕರೆತಂದ ಎಡರಂಗ ಸರ್ಕಾರದ ಮುಂದುವರಿದ ಆಡಳಿತ ಇಂದಿನ ಅಗತ್ಯ ಎಂದು ಜಾಥಾ ಮುಖಂಡ ಕೆ.ಆರ್. ಜಯಾನಂದ ಹೇಳಿದರು.
ಪ್ರತಿಕೂಲ ಕಾಲಾವಸ್ಥೆಯಲ್ಲೂ ಜಾಥಾವನ್ನು ಸ್ವಾಗತಿಸಿದ್ದಕ್ಕೆ ಎಡರಂಗ ಕಾರ್ಯಕರ್ತರನ್ನು ಊರವರನ್ನು ಅಭಿನಂದಿಸಿದರು. ವಿವಿಧ ಸ್ವಾಗತ ಕೇಂದ್ರದಲ್ಲಿ ಜಾಥಾ ಉಪ ನೇತಾರ ಸಿ.ಎ. ಝುಬೈರ್, ಪ್ರಬಂಧಕ ಜಯರಾಮ ಬಲ್ಲಂಗುಡೇಲು, ಅಹಮ್ಮದ್ ಅಲಿ, ಬೇಬಿ ಶೆಟ್ಟಿ, ಹಾರಿಸ್ ಪೈವಳಿಕೆ, ತಾಜುದ್ದೀನ್ ಮೊದಲಾದವರು ಮಾತನಾಡಿದರು.

.jpg)
.jpg)
