ಕುಂಬಳೆ: ಶಿರಿಯ ವಾನಂದೆ ನಿವಾಸಿ, ಹಿರಿಯ ಆರೆಸ್ಸೆಸ್ ಸ್ವಯಂಸೇವಕ ಹಾಗೂ ಕುಂಬಳೆಯ ಅಕ್ಷತಾ ಫೈನಾನ್ಸ್ ಮಾಲಿಕ ಆನಂದ ಶೆಟ್ಟಿ(81)ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರಿಗೆ ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಹಾಗೂ ಕೃಷಿ ಭವನ ಜಂಟಿಯಾಗಿ ಮಾದರಿ ಕ್ರಷಿಕ ಪುರಸ್ಕಾರ ನೀಡಿ ಗೌರವಿಸಿತ್ತು. ಆರೆಸ್ಸೆಸ್ ಶಿರಿಯ ಶಾಖೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಶಿರಿಯ ಸೀರೆ ಶ್ರೀ ಶಂಕರನಾರಾಯಣ ದ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.


