ಕಾಸರಗೋಡು: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹತ್ತರ ಹರೆಯದ ಬಾಲಕಿಗೆ ಕಿರುಕುಳಕ್ಕೆ ಯತ್ನಿಸಿದ ಪಯ್ಯನ್ನೂರು ವೆಳ್ಳುರು ಮೂಪನ್ನಡಗತ್ತ್ ವೀಟಿಲ್ ನಿವಾಸಿ ಫಿರ್‍ದೌಸ್(39)ಎಂಬಾತನನ್ನು ಕಾಸರಗೋಡು ನಗರ ಮಹಿಳಾ ಠಾಣೆ ಎಸ್.ಐ ಕೆ.ಅಜಿತಾ ಮತ್ತು ಜಿಲ್ಲಾ ಕ್ರೈಂ ಸಕ್ವೇಡ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೈಕಲಲ್ಲಿ ತೆರಳುತ್ತಿದ್ದ ಬಾಲಕಿಗೆ ಆರೋಪಿ ಕಿರುಕುಳಕ್ಕೆ ಯತ್ನಿಸಿದ್ದು, ನಂತರ ತಲೆಮರೆಸಿಕೊಂಡಿದ್ದನು. ಆರೋಪಿ ಪತ್ತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ತಪಾಸಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ಹೊಸದುರ್ಗ ಹಾಗೂ ಪೆರಿಙÉೂೀ ಪೊಲೀಸ್ ಠಾಣೆಗಳಲ್ಲೂ ಕಿರುಕುಳ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

