HEALTH TIPS

ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು' ನೀಡಿ': ರಾಘವ ಚಡ್ಡಾ

ನವದೆಹಲಿ (PTI): 'ಸರಿಯಾಗಿ ಕೆಲಸ ಮಾಡದಿದ್ದರೆ, ಐದು ವರ್ಷ ಪೂರ್ಣಗೊಳ್ಳುವ ಮೊದಲೇ ಶಾಸಕರು ಅಥವಾ ಸಂಸದರನ್ನು 'ಜನಪ್ರತಿನಿಧಿಗಳ ಸ್ಥಾನದಿಂದ ಕೆಳಗಿಳಿಸುವ ಹಕ್ಕು' ಇರುವ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ ಚಡ್ಡಾ ಅವರು ಬುಧವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.

'ಜನರಿಗೆ ಈ ರೀತಿಯ ಸಾಂವಿಧಾನಿಕ ಹಕ್ಕು ನೀಡಬೇಕು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ನ್ಯಾಯಾಧೀಶರನ್ನು ಪದಚ್ಯುತಗೊಳಿವ ಹಕ್ಕು ನೀಡಲಾಗಿದೆ. ಸರ್ಕಾರಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅಂತೆಯೇ ಶಾಸಕರು, ಸಂಸದರ ವಿರುದ್ಧವೂ ಇಂಥ ವ್ಯವಸ್ಥೆಯನ್ನು ರೂಪಿಸಬೇಕು' ಎಂದರು.

'ಈ ವ್ಯವಸ್ಥೆಯನ್ನು ರಾಜಕೀಯವಾಗಿ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಯನ್ನು ಕೆಳಗಿಳಿಸುವ ಕಾರಣಗಳಿರುವ, ಸೂಕ್ತ ರೀತಿಯಲ್ಲಿ ಪರಿಶೀಲನೆಗೆ ಒಳಪಡಿಸಿದ ಅರ್ಜಿಯನ್ನು ಆ ಮತಕ್ಷೇತ್ರದ ಶೇ 50ಕ್ಕೂ ಹೆಚ್ಚಿನ ಮತದಾರರು ಒಪ್ಪಿಕೊಳ್ಳಬೇಕು. ಜನಪ್ರತಿನಿಧಿಯೊಬ್ಬರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಮೊದಲ 18 ತಿಂಗಳು ಅವಕಾಶ ನೀಡಬೇಕು' ಎಂದರು.

ರಾಘವ ಚಡ್ಡಾ ಎಎಪಿ ಸಂಸದಭ್ರಷ್ಟಾಚಾರ ವಂಚನೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತಪ್ಪು ಮಾಡಿದ್ದು ಸಾಬೀತಾಗಿದ್ದರೆ ಮಾತ್ರವೇ ಈ ಹಕ್ಕನ್ನು ಬಳಸುವಂತಿರಬೇಕು. ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಈ ಹಕ್ಕು ಬಳಕೆಯಾಗಬಾರದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries