HEALTH TIPS

ಉತ್ತರ ಕೊರಿಯಾದ 'ವರ್ಕರ್ಸ್‌ ಪಾರ್ಟಿ' ಮುಖ್ಯಸ್ಥರಾಗಿ ಕಿಮ್ ಜಾಂಗ್ ಉನ್ ಮರು ಆಯ್ಕೆ

ಸೋಲ್‌: ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ (42) ಅವರು ದೇಶದ ಆಡಳಿತಾರೂಢ ಪಕ್ಷವಾಗಿರುವ ವರ್ಕರ್ಸ್ ಪಾರ್ಟಿಯ ಅತ್ಯುನ್ನತ ಹುದ್ದೆಗೆ ಮರು ಆಯ್ಕೆಯಾಗಿದ್ದಾರೆ.

ದೇಶದ ಅಣ್ವಸ್ತ್ರ ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತೆ ಕಿಮ್‌ ಅವರನ್ನೇ ಸದಸ್ಯರು ಆಯ್ಕೆ ಮಾಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಅವರು ದೇಶದ ಪ್ರತಿಷ್ಠೆ ಹೆಚ್ಚಿಸುವ ಮೂಲಕ ಮಿಲಿಟರಿ, ಪರಮಾಣು ಶಕ್ತಿಯನ್ನು ಬಲಪಡಿಸಿದ್ದಾರೆ. ಕ್ರಾಂತಿಕಾರಿ ಹೋರಾಟಕ್ಕೆ ಅನುಕೂಲಕರವಾದ ಅಂತರರಾಷ್ಟ್ರೀಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಸಮಾವೇಶದಲ್ಲಿ ಶ್ಲಾಘಿಸಲಾಗಿದೆ.

ಕಿಮ್ ನಾಯಕತ್ವದಲ್ಲಿ ಉತ್ತರ ಕೊರಿಯಾದ ಪರಮಾಣು ಪಡೆಗಳನ್ನು ಆಮೂಲಾಗ್ರವಾಗಿ ಬಲಪಡಿಸಲಾಗಿದೆ. ಪಕ್ಷದ ಸಭೆಯಲ್ಲಿ ಕೇಂದ್ರ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಕೆಲವು ನಿಯಮಗಳ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಲಾಗಿದೆ. ಈ ಕುರಿತ ವಿವರಗಳನ್ನು ಬಹಿರಂಗಪಡಿಸಿಲ್ಲ.

ಸದ್ಯ ನಡೆಯುತ್ತಿರುವ ವರ್ಕರ್ಸ್ ಪಾರ್ಟಿ ಸಮಾವೇಶದ ಬಗ್ಗೆ ಆ ದೇಶದ ಒಳಗೆ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಕುತೂಹಲ ಮೂಡಿದೆ. ದೇಶವನ್ನು ಆಳುತ್ತಿರುವ ಕಿಮ್ ಜಾಂಗ್ ಉನ್ ಅವರ ಮುಂದಿನ ಆದ್ಯತೆಗಳು, ಸೇನೆ, ವಿದೇಶಾಂಗ ನೀತಿ, ಆರ್ಥಿಕತೆ, ಪ್ರಮುಖ ಅಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಅದಕ್ಕಿಂತ ಹೆಚ್ಚಿಗೆ ಅಂದು ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಯಾರು ಎನ್ನುವ ಬಗ್ಗೆಯೂ ಘೋಷಣೆ ಹೊರಬೀಳಬಹುದು ಎನ್ನುವ ಕಾರಣಕ್ಕೆ ಅದರ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries