ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಚಂಡಿಕಾ ಹವನ ನಡೆಯಿತು. ಬೆಳಗ್ಗೆ 11ಕ್ಕೆ ಹವನ ಪೂಣಾಹುತಿಯೊಂದಿಗೆ ತುಲಾಭಾರ ಸೇವೆ ನಡೆಯಿತು. ಸಂಜೆ ಕಜಂಬು ಉತ್ಸವ, ಶ್ರೀ ಉಳ್ಳಾತೀ ನೇಮ ನಡೆಯಿತು.
ಫೆ. 4ರಂದು ಬೆಳಗ್ಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6ಕ್ಕೆ ತಿರುವಾದಿರ, 7ಕ್ಕೆ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದಿಂದ 'ಆಕರ್ಷಣ' ಭರತ ನಾಟ್ಯ, ರಾತ್ರಿ 8ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, 8.30ಕ್ಕೆತೊಡಙಳ್, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯುವುದು. 5ರಂದುಬೆಳಗ್ಗೆ 9ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲದೊಂದಿಗೆ ಧ್ವಜಾವರೋಹಣ ನಡೆಯುವುದು.


