ಬದಿಯಡ್ಕ: ಬೀದಿನಾಯಿಗಳ ಕಾಟವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಡಿ. ಶಂಕರ ತಿಳಿಸಿದರು. ವಿವಿಧ ವಾರ್ಡುಗಳ ಸದಸ್ಯರಲ್ಲಿ ವಿವರಗಳನ್ನು ಪಡೆದ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬೇಕಾದ ವ್ಯವಸ್ಥೆಯನ್ನು ತೆಗೆದುಕೊಳ್ಳುವಂತೆ ತಿಳಿಸಿದರು.
ಕುಂಟಿಕಾನ ಚೆನ್ನೆಗುಳಿಯಲ್ಲಿ ಬೀದಿನಾಯಿಗಳ ಆಕ್ರಮಣದಿಂದ ಶಾಲಾಮಕ್ಕಳು, ಜನರು ಭಯಬೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೆಗುಳಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಸಾಕುನಾಯಿಗಳನ್ನು ಕಟ್ಟಿಹಾಕುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ವಾರ್ಡು ಸದಸ್ಯೆ ಅನ್ನತ್ ಬೀವಿ, ಪೊಲೀಸ್ ಅಧಿಕಾರಿಗಳು, ಸ್ಥಳೀಯರು ಈ ಸಂದರ್ಭ ಉಪಸ್ಥಿತರಿದ್ದರು.

.jpg)
