HEALTH TIPS

ಶಾರ್ಟ್‌ಕಟ್ ಬೇಡ, ಪ್ರತಿಭೆಯ ಮೇಲೆ ನಂಬಿಕೆ ಇಡಿ: ಯುವ ಗಾಯಕರಿಗೆ ವಿಶಾಲ್ ದದ್ಲಾನಿ ಸಲಹೆ

ಮುಂಬೈ: ಬಾಲಿವುಡ್‌ ನ ಖ್ಯಾತ ಗಾಯಕ-ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, "ಪ್ರಭಾವಿ ಸಂಪರ್ಕ"ಗಳ ಮೂಲಕ ತಮ್ಮನ್ನು ತಲುಪಲು ಯತ್ನಿಸಿದ ಯುವ ಗಾಯಕನೊಬ್ಬನ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಶಾರ್ಟ್‌ ಕಟ್‌ ಗಳ ಬದಲು ತಮ್ಮದೇ ಪ್ರತಿಭೆ, ಪರಿಶ್ರಮ ಮತ್ತು ತಾಳ್ಮೆಯ ಮೇಲೆ ನಂಬಿಕೆ ಇಡಬೇಕೆಂದು ಅವರು ಹೊಸಬರಿಗೆ ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ.

ತಮ್ಮ ಪೋಸ್ಟ್‌ ನಲ್ಲಿ ವಿಶಾಲ್ ದದ್ಲಾನಿ, "ಹೊಸ ಗಾಯಕರಿಗೆ ಕೆಲವು ಸಲಹೆಗಳು. ಯಾವುದೇ ಸಚಿವ ಅಥವಾ ಅವರ ಸಹಾಯಕರನ್ನು ನನಗೆ ಕರೆ ಮಾಡಲು ಕೇಳಬೇಡಿ. ಹಾಗೆ ಮಾಡಿದರೆ ನನ್ನನ್ನು ಎಂದಿಗೂ ಭೇಟಿಯಾಗಲು ಸಾಧ್ಯವಿಲ್ಲ," ಎಂದು ಎಚ್ಚರಿಸಿದ್ದಾರೆ. ಸಂಪರ್ಕಗಳ ಮೂಲಕ ನನ್ನ ಬಳಿ ಬರುವ ಪ್ರಯತ್ನಿಸುವ ಜನರ ಬಗ್ಗೆ ನನಗೆ ಯಾವುದೇ ಗೌರವವಿಲ್ಲ. ಅದನ್ನು ಪ್ರಯತ್ನಿಸಿದ ವ್ಯಕ್ತಿಗೆ, ಸಚಿವರನ್ನು ಈಗಾಗಲೇ ದೂರವಿಡಡಲಾಗಿದೆ. ನಿಮ್ಮನ್ನೂ ಆ ಪಟ್ಟಿಗೆ ಸೇರಿಸಲಾಗಿದೆ. ಈಗ ನೀವು ಉತ್ತಮ ಗಾಯಕರಾಗಿದ್ದರೂ ಸಹ, ನಿಮ್ಮೊಂದಿಗೆ ಕೆಲಸ ಮಾಡಲು ನನಗೆ ಆಸಕ್ತಿ ಇಲ್ಲ. ಕ್ಷಮಿಸಿ," ಎಂದು ಅವರು ಹೇಳಿದ್ದಾರೆ.

"ದಯವಿಟ್ಟು ನಿಮ್ಮ ಪ್ರತಿಭೆಯಲ್ಲಿ ನಂಬಿಕೆ ಇಡಿ, ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿರಿ ಮತ್ತು ತಾಳ್ಮೆಯಿಂದಿರಿ. ನೀವು ಒಳ್ಳೆಯವರಾಗಿದ್ದರೆ, ನಿಮ್ಮ ಸಮಯ ಬರುತ್ತದೆ. 'ಶಿಪಾರಸ್ಸು' ಮಾಡುವ ಕೆಲಸವನ್ನು ಮಾಡಬೇಡಿ. ಇದು ನೀರಸ; ಎಲ್ಲಕ್ಕಿಂತ ಹೆಚ್ಚಾಗಿ, ಇದು ನಿಮ್ಮ ಪ್ರತಿಭೆ ಸಾಕು ಎಂದು ನೀವು ನಂಬುವುದಿಲ್ಲ ಎಂಬುದನ್ನು ತೋರಿಸುತ್ತದೆ," ಎಂದು ಬರೆದಿದ್ದಾರೆ.

ವಿಶಾಲ್ ದದ್ಲಾನಿ ಅವರು 'ಖುದಾ ಜಾನೆ', 'ಬ್ಯಾಂಗ್ ಬ್ಯಾಂಗ್', 'ಇಷ್ಕ್ ವಾಲಾ ಲವ್', 'ಫಕೀರಾ', 'ಬೇಷರಾಮ್ ರಂಗ್' ಸೇರಿದಂತೆ ಅನೇಕ ಜನಪ್ರಿಯ ಹಾಡುಗಳ ಸಂಯೋಜನೆಗೆ ಖ್ಯಾತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries