ಜಮ್ಮು: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಸಂಶಯಾಸ್ಪದ ಡ್ರೋನ್ ಹಾರಾಟ ಕಂಡುಬಂದ ಕಾರಣ ಭದ್ರತಾ ಪಡೆಗಳು ಶುಕ್ರವಾರ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಗುಲಪುರ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಆರಂಭಗೊಂಡಿದ್ದು, ಭದ್ರತಾ ಕ್ರಮದ ಭಾಗವಾಗಿ ಪಡೆಗಳು ಹಲವು ಸುತ್ತು ಗುಂಡು ಹಾರಿಸಿವೆ.
ಆ ಬಳಿಕ ಗಡಿಯಿಂದ ಡ್ರೋನ್ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿವೆ.

