ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದ ಬೇಕರಿಯೊಂದಕ್ಕೆಬೆಂಕಿ ತಗುಲಿ ಅಪಾರ ಹಾಣಿ ಸಂಭವಿಸಿದೆ. ಮಂಗಳವಾರ ತಡರಾತ್ರಿ ಬೆಂಕಿ ತಗುಲಿದ್ದು, ಸ್ಥಳೀಯರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ಶಮನಗೊಳಿಸುವ ಮುಲಕ ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಸತೀಶ್ ಕೋಟೆಕಣಿ ಎಂಬವರ ಮಾಲಿಕತ್ವದ ಲಕ್ಷ್ಮೀ ಬೇಕರಿ ಬೆಂಕಿಗಾಹುತಿಯಾಗಿರುವುದು. ಬೇಕರಿಯೊಂದಿಗೆ ಕ್ಯಾಂಟೀನ್ ಕೂಡಾ ಕಾರ್ಯಾಚರಿಸುತ್ತಿದ್ದು, ಅಪಾರ ಪ್ರಮಾಣದ ಆಹಾರ ಸಾಮಗ್ರಿ, ಪೀಠೋಪಕರಣ ಹಾನಿಗೀಡಾಗಿದೆ.


