HEALTH TIPS

ಯುವತಿಯರ ಪ್ರವೇಶವನ್ನು ವಿರೋಧಿಸಿದ್ದಕ್ಕಾಗಿ ಪ್ರತೀಕಾರದ ಕ್ರಮವಾಗಿ ತನ್ನನ್ನು ಆರೋಪಿಯನ್ನಾಗಿಸಲಾಯಿತು: ಸರ್ಕಾರದ ವಿರುದ್ಧ ಕಂಠಾರರ್ ರಾಜೀವರರ್ ಬಿಚ್ಚಿದ ಸತ್ಯಗಳು ಬಹಿರಂಗ

ತಿರುವನಂತಪುರಂ: ಶಬರಿಮಲೆಯ ಮಾಜಿ ತಂತ್ರಿ ಕಂಠಾರರ್ ರಾಜೀವರರ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ಜಾಮೀನು ಅರ್ಜಿಯಲ್ಲಿನ ವಾದಗಳ ಸಮಯದಲ್ಲಿ, ರಾಜೀವರರ್ ತಮ್ಮ ವಿರುದ್ಧ ತೆಗೆದುಕೊಂಡ ಕ್ರಮವು ಶಬರಿಮಲೆಯಲ್ಲಿ ಯುವತಿಯರ ಪ್ರವೇಶವನ್ನು ವಿರೋಧಿಸಿದ್ದಕ್ಕಾಗಿ ಪ್ರತೀಕಾರವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 


ಈ ಬಗ್ಗೆ ಮಾಹಿತಿ ಜಾಮೀನು ನೀಡುವ ಆದೇಶದಲ್ಲಿ ಹೊರಬಿದ್ದಿದೆ. ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಯಿತು. ಶಬರಿಮಲೆ ತೀರ್ಪು ಹೊರಡಿಸಿದಾಗ, ಸಂಪ್ರದಾಯದ ಉಲ್ಲಂಘನೆ ಮಾಡಬಾರದು ಎಂಬ ನಿಲುವನ್ನು ಅವರು ತೆಗೆದುಕೊಂಡರು.ತಂತ್ರಿ ರಾಜೀವರರ್ ಸರ್ಕಾರ ತನ್ನ ಮೇಲೆ ಕೋಪಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆ ಸಮಯದಲ್ಲಿ ಸರ್ಕಾರದ ಇಚ್ಛೆಯಂತೆ ಕೆಲವು ಹಿರಿಯ ಪೋಲೀಸ್ ಅಧಿಕಾರಿಗಳು ಮಹಿಳೆಯರಿಗೆ ಗರ್ಭಗುಡಿಗೆ ಪ್ರವೇಶಿಸಲು ಅವಕಾಶ ನೀಡಲು ಪ್ರಯತ್ನಿಸಿದ್ದರು. ತಂತ್ರಿ ಅದನ್ನು ಬಲವಾಗಿ ವಿರೋಧಿಸಿದ್ದರು.

ಇದಕ್ಕಾಗಿ ಪೋಲೀಸ್ ಅಧಿಕಾರಿಗಳು ಸಹ ಅವರ ಮೇಲೆ ಕೋಪಗೊಂಡಿದ್ದರು. ಆಡಳಿತ ಪಕ್ಷದ ಅನೇಕರು ಅವರ ವಿರುದ್ಧ ದ್ವೇಷ ಹೊಂದಿದ್ದರು. ಈ ಆಧಾರದ ಮೇಲೆ ತಂತ್ರಿಯಾದ ತನನ್ನೂ ಚಿನ್ನದ ಕಳ್ಳತನದಲ್ಲಿ ಭಾಗಿಯಾಗಿಸಿ ಹಗೆ ತೀರಿಸಿದ್ದಾರೆ ಎಂದು ಕಂಠಾರರ್ ರಾಜೀವರರ್ ಆರೋಪಿಸಿದ್ದಾರೆ.

ಪ್ರತಿದಿನ ಶಬರಿಮಲೆ ದೇವಸ್ಥಾನವನ್ನು ತೆರೆಯುವ ಕ್ರಮವೂ ಇತ್ತು. ಅವರು ಅದನ್ನೂ ವಿರೋಧಿಸಿದರು. ಮಂತ್ರಿಗಳು ಸೇರಿದಂತೆ ರಾಜಕೀಯ ಗಣ್ಯರು ಉಣ್ಣಿಕೃಷ್ಣನ್ ಪೋತ್ತಿಗೆ ಪರಿಚಿತರಿಗಿಂತ ಹತ್ತಿರವಾಗಿದ್ದರು. ಇದನ್ನು ಮರೆಮಾಡಲು, ತಂತ್ರಿ ಮತ್ತು ಪೋತ್ತಿ ಮಧ್ಯೆ ಸಂಬಂಧವಿದೆ ಎಂದು ಸ್ಥಾಪಿಸಲು ಪ್ರಯತ್ನಿಸಿದರು. ಚಿತ್ರಗಳು ಪುರಾವೆಯಾಗಿದ್ದರೆ, ಪೋತ್ತಿಯೊಂದಿಗೆ ಅನೇಕ ಉನ್ನತ ಹುದ್ದೆಯಲ್ಲಿರುವ ಜನರ ಚಿತ್ರಗಳು ಹೊರಬಂದಿವೆ. ಅವರ ಮೇಲೂ ಆರೋಪ ಹೊರಿಸಬೇಡವೇ ಎಂದು ತಂತ್ರಿ ಕೇಳಿದರು.

ಉಣ್ಣಿಕೃಷ್ಣನ್ ಪೋತ್ತಿ ಅವರ ಸಂಬಂಧಿಕರು ಶಬರಿಮಲೆಯಲ್ಲಿ ಕೆಲಸ ಮಾಡುತ್ತಿದ್ದರು. ಪೋತ್ತಿಯ ಮಾವ ಶಬರಿಮಲೆಯಲ್ಲಿ ಕೀರ್ ಶಾಂತಿಯಾಗಿದ್ದರು. ಮಾವನ ಸಹೋದರ ಕೂಡ ಶಬರಿಮಲೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಇದು ಪೋತ್ತಿ ಮತ್ತು ಶಬರಿಮಲೆ ನಡುವಿನ ಸಂಬಂಧವಾಗಿತ್ತು. ಎಸ್‍ಐಟಿ ತನಿಖೆಯ ಪ್ರತಿಯೊಂದು ಹಂತದಲ್ಲೂ ಈ ಮಾಹಿತಿಯನ್ನು ಮಾಧ್ಯಮಗಳಿಂದ ಮರೆಮಾಡಲಾಗಿತ್ತು.

ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆಯನ್ನು ತಲುಪಿದ್ದು ತಮ್ಮ ಮೂಲಕವೇ ಎಂದು ಸ್ಥಾಪಿಸಲು ಈ ಎಲ್ಲಾ ವಿಷಯಗಳನ್ನು ಮರೆಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ರಾಜೀವರರ್  ಆರೋಪಿಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries