ಬದಿಯಡ್ಕ: ಅಗಲ್ಪಾಡಿಯಲ್ಲಿ ನಡೆದ 9ನೆಯ ಕಾಸರಗೋಡು ಜಿಲ್ಲಾ ಜೂನಿಯರ್ ತ್ರೋಬಾಲ್ ಚಾಂಪಿಯನ್‍ಶಿಪ್ಪನ್ನು ಶ್ರೀ ವಾಣಿ ವಿಜಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಎಸ್ ಶೆಟ್ಟಿ ಅವರು ಉದ್ಘಾಟಿಸಿದರು. ಶಶಿಕಾಂತ್ ಜಿ. ಆರ್ ಬಹುಮಾನ ವಿತರಿಸಿದರು.
ಈ ಸಂದರ್ಭ ಇಡುಕ್ಕಿ ಜಿಲ್ಲೆಯ ರಾಜಕ್ಕಡ್‍ನಲ್ಲಿ ಜರುಗಲಿರುವ ರಾಜ್ಯಮಟ್ಟದ ತ್ರೋಬೋಲ್ ಚಾಂಪಿಯನ್ಶಿಪ್ ಇರುವ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಯಿತು. ಸಂತೋಷ್ ಪಿ. ಎಚ್.ಸ್ವಾಗತಿಸಿ, ವಂದಿಸಿದರು.


