68 ವರ್ಷದ ಮಾಜಿ ನಟಿ ಟೀನಾ ಅಂಬಾನಿ ಅವರಿಗೆ ಇಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಆದರೆ ಅವರು ಹಾಜರಾಗಲಿಲ್ಲ.
ಈಗ ಫೆಬ್ರವರಿ 17ರಂದು ಹಾಜರಾಗುವಂತೆ ಟೀನಾ ಅಂಬಾನಿ ಅವರಿಗೆ ಹಾಗೂ ಫೆಬ್ರವರಿ 18ರಂದು ಹಾಜರಾಗುವಂತೆ 66 ವರ್ಷದ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.
ಅವರು ವಿಚಾರಣೆಗೆ ಹಾಜರಾದಾಗ ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

