ಸೋಮವಾರ ಸಂಜೆ ''ದಿ ವೈರ್''ನ ಇನ್‌ಸ್ಟಾಗ್ರಾಂ ಖಾತೆ ಸುಮಾರು ಎರಡು ಗಂಟೆಗಳ ಕಾಲ ಭಾರತದಲ್ಲಿ ಲಭ್ಯವಿರಲಿಲ್ಲ ಎಂದು ವರದಿಯಾಗಿದೆ.
ಇನ್‌ಸ್ಟಾಗ್ರಾಂ ಪುಟಕ್ಕೆ ಭೇಟಿ ನೀಡಿದವರು, ''ಈ ವಿಷಯವನ್ನು ನಿರ್ಬಂಧಿಸುವ ಕಾನೂನಾತ್ಮಕ ವಿನಂತಿಯನ್ನು ವೇದಿಕೆ ಪಾಲಿಸುತ್ತಿರುವುದರಿಂದ, ಈ ಪುಟ ಭಾರತದಲ್ಲಿ ಲಭ್ಯವಿಲ್ಲ'' ಎಂಬ ಸಂದೇಶವನ್ನು ನೋಡಿದ್ದಾರೆ. ವಿದೇಶಗಳ ಅಥವಾ ವಿಪಿಎನ್ ಬಳಕೆದಾರರಿಗೆ ಮಾತ್ರ ಈ ಖಾತೆ ಲಭ್ಯವಾಗಿದೆ ಎಂದು ''ದಿ ವೈರ್'' ವರದಿ ಮಾಡಿದೆ.
ಇನ್‌ಸ್ಟಾಗ್ರಾಮ್, ಪೇಸ್‌ಬುಕ್ ಹಾಗೂ ಎಕ್ಸ್‌ನಲ್ಲಿ ಶನಿವಾರ ಸಂಜೆ ಸುಮಾರು 6.30ಕ್ಕೆ ಅಪ್‌ಲೋಡ್ ಮಾಡಲಾದ 52 ಸೆಕೆಂಡ್‌ಗಳ ಈ ವೀಡಿಯೋವನ್ನು ಬ್ಲಾಕ್ ಮಾಡಲಾಗಿದೆ. ಮಂಗಳವಾರ ಸಂಜೆ 3 ಗಂಟೆಗೆ ''ದಿ ವೈರ್''ನ ಇನ್‌ಸ್ಟಾಗ್ರಾಂ ಖಾತೆಯನ್ನು ಮರು ಸ್ಥಾಪಿಸಲಾಗಿದೆ. ಆದರೆ ಮೂರು ವೇದಿಕೆಗಳಲ್ಲಿ ಈ ವಿಡಂಬನೆಯ ಅನಿಮೇಷನ್ ಲಭ್ಯವಿರಲಿಲ್ಲ.
ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳಿಂದ ನುಣುಚಿಕೊಂಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನಿಮೇಷನ್ ವಿಡಂಬನೆ ಮಾಡಿದೆ.

