ಯುಪಿಎಸ್‌ಸಿ 2026 ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ.
ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆ ಮೇ 24ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಫೆಬ್ರುವರಿ 24 ಕೊನೆಯ ದಿನ.
ಎಲ್ಲ ಅಭ್ಯರ್ಥಿಗಳು 'ಚಹರೆ ದೃಢೀಕರಣ' ಪರೀಕ್ಷೆಗೆ ಒಳಪಡಬೇಕು. ಇದರಿಂದ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಹಾಗೂ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಬಳಸುವಂತೆಯೂ ಯುಪಿಎಸ್‌ಸಿ ಸಲಹೆ ನೀಡಿದೆ.
ಪ್ರಿಲಿಮಿನರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಾಖಲಿಸಲು ನಿಗದಿಪಡಿಸಿದ್ದ ಕಾಲಮಿತಿಯನ್ನು 7 ದಿನಗಳಿಂದ 5 ದಿನಗಳಿಗೆ ಯುಪಿಎಸ್‌ಸಿ ಕಡಿತಗೊಳಿಸಿದೆ.

