HEALTH TIPS

ಬೇರೆ ಕಾಲೇಜಿಗೆ ವೈದ್ಯಕೀಯ ವಿದ್ಯಾರ್ಥಿ ವರ್ಗಾವಣೆ ನಿಷೇಧ ಅಮಾನ್ಯ: ದೆಹಲಿ HC

ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಯು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ವರ್ಗಾವಣೆ ಮಾಡಿಕೊಳ್ಳಲು ಪೂರ್ಣ ನಿಷೇಧ ಹೇರಿರುವುದು ಅಮಾನ್ಯ ಎಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿದೆ.

ಈ ಕುರಿತು ಅಗತ್ಯ ಷರತ್ತುಗಳನ್ನು ವಿಧಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸುವ ಸೂಕ್ತ ನೀತಿ ಜಾರಿಗೊಳಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್‌ ಕರಿಯಾ ನೇತೃತ್ವದ ನ್ಯಾಯಪೀಠ, '2023ರ ವೈದ್ಯಕೀಯ ಪದವಿ ಶಿಕ್ಷಣ ನಿಯಂತ್ರಣದ 18ನೇ ನಿಯಮವು ಸಂವಿಧಾನದ ವಿರುದ್ಧ ಹಾಗೂ ಅಸಮಂಜಸವಾಗಿದೆ' ಎಂದು ತಿಳಿಸಿದೆ.

ಶೇಕಡಾ 40ರಷ್ಟು ಅಂಧತ್ವ ಹೊಂದಿದ್ದ ವೈದ್ಯಕೀಯ ವಿದ್ಯಾರ್ಥಿಯು ಬರ್ಮೇರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ನವದೆಹಲಿಯ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಬಯಸಿ, ಅದಕ್ಕಾಗಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಿದೆ.

ಅರ್ಜಿದಾರರ ವಿಚಾರದಲ್ಲಿ ಮೂರು ವಾರದ ಒಳಗಾಗಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌, ಎನ್‌ಎಂಸಿಗೆ ನಿರ್ದೇಶನ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries