HEALTH TIPS

ಎಪ್‌ ಸ್ಟೀನ್ ನೊಂದಿಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ; 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಹರ್ದೀಪ್ ಸಿಂಗ್ ಪುರಿ ಪುತ್ರಿ

ನವದೆಹಲಿ: ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಹಾಗೂ ಶಿಶುಕಾಮಿ ಜೆಫ್ರಿ ಎಪ್‌ ಸ್ಟೀನ್ ಹಾಗೂ ತನ್ನ ನಡುವೆ ಸಂಬಂಧ ಕಲ್ಪಿಸುವ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕಲು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

10 ಕೋಟಿ ರೂ. ಪರಿಹಾರ ನೀಡುವಂತೆ ಹಾಗೂ ಹಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡುವಂತೆ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ಹಿಮಾಯನಿ ಪುರಿ ನ್ಯಾಯಾಲಯವನ್ನು ಕೋರಿದ್ದಾರೆ.

ಎಪ್‌ ಸ್ಟೀನ್ ಅಥವಾ ಆತನ ಕ್ರಿಮಿನಲ್ ಚಟುವಟಿಕೆಗಳೊಂದಿಗೆ ತಾನು ಹಣಕಾಸು ಸಂಬಂಧ ಹೊಂದಿದ್ದೇನೆ ಅಥವಾ ಆತನ ಸಂಪರ್ಕ ಗುಂಪಿನಲ್ಲಿ ತಾನಿದ್ದೇನೆ ಎಂದು ಹಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು ತಪ್ಪಾಗಿ ಪ್ರತಿಪಾದಿಸಿವೆ ಎಂದು ಹಿಮಾಯನಿ ಪುರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಿಂದ ಇಂತಹ ವಿಷಯಗಳನ್ನು ತೆಗೆದು ಹಾಕುವಂತೆ ನ್ಯಾಯಾಲಯವನ್ನು ಆಗ್ರಹಿಸಿರುವ ಅವರು, ಗೂಗಲ್, ಎಕ್ಸ್, ಮೆಟಾ ಹಾಗೂ ಲಿಂಕ್ಡ್‌ಇನ್ನಂತಹ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಇದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ತೆಗೆದು ಹಾಕುವಂತೆ ನ್ಯಾಯಾಲಯದಿಂದ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದಾರೆ.

ಈ ಮಾನನಷ್ಟ ಮೊಕದ್ದಮೆ ಮಂಗಳವಾರ ವಿಚಾರಣೆಗೆ ಬರಲಿದೆ.

ಹಿಮಾಯನಿ ಪುರಿ ಅವರ ಮಾನನಷ್ಟ ಮೊಕದ್ದಮೆಯ ಪ್ರಕಾರ, 2026 ಫೆಬ್ರವರಿ 22ರಿಂದ ಮಾನಹಾನಿಕರ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲು ಆರಂಭವಾಗಿದೆ. ಎಪ್‌ ಸ್ಟೀನ್ ಅಥವಾ ಆತನ ಕ್ರಿಮಿನಲ್ ಚಟುವಟಿಕೆಗಳೊಂದಿಗೆ ನೇರ ಅಥವಾ ಪರೋಕ್ಷ ವ್ಯವಹಾರ, ಹಣಕಾಸು, ವೈಯಕ್ತಿಕ ಅಥವಾ ಆತನ ಸಂಪರ್ಕ ಗುಂಪಿನೊಂದಿಗೆ ಸಂಬಂಧ ಹೊಂದಿರುವುದಾಗಿ ಈ ಪೋಸ್ಟ್‌ ಗಳಲ್ಲಿ ಆರೋಪಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries