HEALTH TIPS

ನವದೆಹಲಿ: 1,111 ಚುನಾವಣಾ ವೀಕ್ಷಕರ ನಿಯೋಜನೆ

ನವದೆಹಲಿ: ಅಸ್ಸಾಂ, ಕೇರಳ, ಪುದುಚೆರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಾಗೂ ಆರು ರಾಜ್ಯಗಳ ಉಪಚುನಾವಣೆಗೆ ಚುನಾವಣಾ ಆಯೋಗವು 1,111 ವೀಕ್ಷಕರನ್ನು ನಿಯೋಜಿಸಿದೆ. ಬುಧವಾರವೇ ನಿಯೋಜಿತ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಅದು ತಿಳಿಸಿದೆ.

1,111 ವೀಕ್ಷಕರ ಪೈಕಿ 557 ಮಂದಿ ಸಾಮಾನ್ಯ ವೀಕ್ಷಕರು, 188 ಪೊಲೀಸ್‌ ವೀಕ್ಷಕರು, 366 ಮಂದಿ ಖರ್ಚು-ವೆಚ್ಚ ವೀಕ್ಷಕರು. ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 20ಬಿ ಮತ್ತು ಸಂವಿಧಾನದ 324ನೇ ವಿಧಿ ಅಡಿಯಲ್ಲಿ ಆಯೋಗವು ವೀಕ್ಷಕರನ್ನು ನೇಮಕ ಮಾಡಿದೆ.

'ವೀಕ್ಷಕರು ಆಯೋಗದ ಕಣ್ಣು ಮತ್ತು ಕಿವಿಯಂತೆ ಕಾರ್ಯನಿರ್ವಹಿಸಲಿದ್ದಾರೆ' ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ವೀಕ್ಷಕರಾಗಿ 294 ಅಧಿಕಾರಿಗಳನ್ನು, ಪೊಲೀಸ್ ವೀಕ್ಷಕರಾಗಿ 84 ಮಂದಿಯನ್ನು ಮತ್ತು 100 ಮಂದಿಯನ್ನು ಖರ್ಚು-ವೆಚ್ಚ ವೀಕ್ಷಕರಾಗಿ ನಿಯೋಜಿಸಲಾಗಿದೆ. ತಮಿಳುನಾಡಿನಲ್ಲಿ 136 ಸಾಮಾನ್ಯ ವೀಕ್ಷಕರು, 40 ಪೊಲೀಸ್‌ ವೀಕ್ಷಕರು ಮತ್ತು 151 ಖರ್ಚು ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ.

ಅಸ್ಸಾಂ ಮತ್ತು ಕೇರಳದಲ್ಲಿ ತಲಾ 51 ಸಾಮಾನ್ಯ ವೀಕ್ಷಕರು, 35 ಪೊಲೀಸ್‌ ವೀಕ್ಷಕರು ಮತ್ತು 50 ಖರ್ಚು ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪುದುಚೆರಿಯಲ್ಲಿ 17 ಸಾಮಾನ್ಯ ವೀಕ್ಷಕರು, ನಾಲ್ವರು ಪೊಲೀಸ್ ವೀಕ್ಷಕರು ಮತ್ತು 17 ಖರ್ಚು ವೆಚ್ಚ ವೀಕ್ಷಕರನ್ನು ಆಯೋಗ ನೇಮಕ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries