ಜಮ್ಮು: ಇಲ್ಲಿನ ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಮೂಲಕ ಎಸೆಯಲಾದ ₹12 ಕೋಟಿ ಮೌಲ್ಯದ 2 ಕೆ.ಜಿಯಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
ಬಿಷ್ಣಾಹ್ ಪ್ರದೇಶದ ಬಹದೂರ್‌ಪುರ ಗ್ರಾಮದಲ್ಲಿನ ಕೃಷಿ ಜಮೀನಿನಲ್ಲಿ ಬುಧವಾರ ರಾತ್ರಿ ಹೆರಾಯಿನ್ ಪತ್ತೆಯಾಗಿದೆ.
ಜಮ್ಮು ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ 101ನೇ ತುಕಡಿಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಂಡರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದರು.

