ಮುಂಬೈ: ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಮಹಾರಾಷ್ಟ್ರದಿಂದ ಎನ್‌ಸಿಪಿ(ಎಸ್‌ಪಿ) ವರಿಷ್ಠ ಶರದ್ ಪವಾರ್, ಅವರ ಮೊಮ್ಮಗ ಪಾರ್ಥ ಪವಾರ್ ಸ್ಪರ್ಧಿಸುತ್ತಿದ್ದಾರೆ.
ಎನ್‌ಸಿಪಿ(ಎಸ್‌ಪಿ)ಯ ಸುಪ್ರಿಯಾ ಸುಳೆ ಪ್ರಸ್ತುತ ಲೋಕಸಭಾ ಸದಸ್ಯರಾಗಿದ್ದಾರೆ. ಶರದ್ ಪವಾರ್ ಹಾಗೂ ಪಾರ್ಥ ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇದರೊಂದಿಗೆ, ಪ್ರಭಾವಿ ಪವಾರ್ ಕುಟುಂಬದ ಮೂವರು ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪಾರ್ಥ ಅವರು ಇತ್ತೀಚೆಗೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಡಿಸಿಎಂ ಅಜಿತ್ ಪವಾರ್ ಅವರ ಹಿರಿಯ ಮಗ. ಅವರು ಎನ್‌ಸಿಪಿ(ಅಜಿತ್ ಪವಾರ ಬಣ) ಅಭ್ಯರ್ಥಿ. ಅವರ ತಾಯಿ ಸುನೇತ್ರಾ ಪವಾರ್ ಸದ್ಯ ಮಹಾರಾಷ್ಟ್ರದ ಡಿಸಿಎಂ.
ಮಾರ್ಚ್ 16ರಂದು ಚುನಾವಣೆ ನಡೆಯಲಿದೆ.

